ನಟಿ ಮಾಲತಿ ಸಾಗರ ಇನ್ನಿಲ್ಲ

ಸೋಮವಾರ, 1 ಏಪ್ರಿಲ್ 2019 (16:39 IST)
ಮಣಿಪಾಲ್ ಆಸ್ಪತ್ರೆಯಲ್ಲಿ ನಟಿ ನಿಧನರಾಗಿದ್ದಾರೆ. ದೆಹಲಿ ನಾಟಕ ಶಾಲೆಯಲ್ಲಿ ರಂಗ ಅಧ್ಯಯನ ಮಾಡಿರುವ ಅವರು ಹಲವಾರು ನಾಟಕ ರಚಿಸಿ ನಿರ್ದೇಶಿಸಿದ್ದಾರೆ. ಅಲ್ಲದೇ ಚಲನಚಿತ್ರದಲ್ಲೂ ನಟಿಸಿದ್ದಾರೆ. ಖ್ಯಾತ ನಾಟಕಕಾರರೂ ನಿರ್ದೇಶಕರೂ ಆದ ಎಸ್. ಮಾಲತಿ ಇನ್ನಿಲ್ಲ. ಅಲ್ಪ ಕಾಲದ ಅನಾರೋಗ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟರು. ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಎಸ್. ಮಾಲತಿ, ಸಮುದಾಯ ರಂಗ ಚಳವಳಿಗೆ ಸಾಕಷ್ಟು ಶಕ್ತಿ ತುಂಬಿದ್ದರು.

‘ಜನಮ್’ ತಂಡದ ಸಫ್ದರ್  ಹಷ್ಮಿ ರಚಿಸಿದ ನಾಟಕಗಳನ್ನು ಕನ್ನಡ ಬೀದಿ ರಂಗಭೂಮಿಗೆ ಒಗ್ಗಿಸಿದ ಹಿರಿಮೆ ಅವರದ್ದು. ಅನೇಕ ಸ್ವತಂತ್ರ ನಾಟಕಗಳನ್ನು ರಚಿಸಿ ಅದನ್ನು ವೇದಿಕೆಗೆ ತಂದಿದ್ದರು. ಮಾಲತಿ ಅವರ ಅಂತಿಮ ಸಂಸ್ಕಾರ ಸಾಗರದಲ್ಲಿ ನಡೆಯಲಿದ್ದು, ಇಂದು ಸಂಜೆಯ ಸುಮಾರಿಗೆ ನಡೆಯಲಿದೆ.

ಬಹಳ ನೋವಿನ ಜೀವನ ನಡೆಸಿದ್ದ ಮಾಲತಿಗೆ, ಸಾವೂ ಕೂಡ ನೋವಿನ ಪಯಣವೇ ಆಗಿತ್ತು.   H1n1 ನಿಂದ ಬಳಲುತ್ತಿದ್ದ ಅವರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.

ರಂಗಕರ್ಮಿ ಎಸ್‌.ಮಾಲತಿ ಅವರಿಗೆ ರಾಜ್ಯದ ಚಂದನ ವಾಹಿನಿ ಕೊಡಮಾಡುವ ವಾರ್ಷಿಕ ಚಂದನ ಪ್ರಶಸ್ತಿ ಲಭಿಸಿದೆ.
ಕೆರೆಗೆ ಹಾರ, ಸಿರಿ ಸಂಪಿಗೆ, ಯಯಾತಿ, ಹಯವದನ, ಹ್ಯಾಮ್ಲೆಟ್‌ ಮುಂತಾದ ನಾಟಕಗಳನ್ನು ನಿರ್ದೇಶಿಸಿ, ಪ್ರದರ್ಶಿಸಿದ್ದಾರೆ. ಜೀವನವೆಂಬ ನಾಟಕ ರಂಗ, ದಲಿತ ಲೋಕ, ಭೀಮಕಥಾನಕ ಮುಂತಾದ ಸ್ವರಚಿತ ನಾಟಕಗಳಲ್ಲದೆ, ರೋಶೋಮನ್‌, ಜನತೆಯ ಶತ್ರು, ಒಂದು ಪಯಣದ ಕಥೆ ಮುಂತಾದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ