ಅಕ್ಕಾ ರಮ್ಯಾಕ್ಕಾ ಬಾರಕ್ಕಾ... ಓಟ್ ಮಾಡಕ್ಕಾ...! ನಟಿ ರಮ್ಯಾಗೆ ಬಿಜೆಪಿ ಟಾಂಗ್
ರಮ್ಯಾ ತವರು ಮಂಡ್ಯದಲ್ಲಿ ಈ ಬಾರಿ ಉಪಚುನಾವಣೆ ನಡೆಯುತ್ತಿದ್ದು, ಮತದಾನ ಮಾಡಲು ಬರುವಂತೆ ಬಿಜೆಪಿ ವ್ಯಂಗ್ಯ ಮಾಡಿದೆ.
ಅಕ್ಕಾ ರಮ್ಯಾಕ್ಕಾ.. ಬಾರಕ್ಕಾ.. ಓಟ್ ಮಾಡಕ್ಕಾ.. ಎಂದು ಮಂಡ್ಯ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ಮೂಲಕ ರಮ್ಯಾಗೆ ಕರೆ ಕೊಟ್ಟಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ರಮ್ಯಾ ಮತದಾನ ಮಾಡದೇ ಟೀಕೆಗೊಳಗಾಗಿದ್ದರು. ಈ ಬಾರಿಯೂ ಅವರು ಮತಗಟ್ಟೆಗೆ ಬರುವುದು ಡೌಟು. ಹೀಗಾಗಿ ಬಿಜೆಪಿ ರಮ್ಯಾಗೆ ಟಾಂಗ್ ಕೊಟ್ಟಿದೆ.