ಶಿವಮೊಗ್ಗದಲ್ಲಿ ನನ್ನ ಮಗನದ್ದೇ ಗೆಲುವು: ಯಡಿಯೂರಪ್ಪ
ತಮ್ಮ ಕುಟುಂಬ ಸಮೇತರಾಗಿ ಶಿವಮೊಗ್ಗದ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಯಡಿಯೂರಪ್ಪ ತಮ್ಮ ಪುತ್ರ ರಾಘವೇಂದ್ರ ಶಿವಮೊಗ್ಗದಲ್ಲಿ ಗೆಲುವು ಸಾಧಿಸುವುದು ಶೇ.100 ರಷ್ಟು ಖಚಿತ ಎಂದಿದ್ದಾರೆ.
ಅಷ್ಟೇ ಅಲ್ಲ, ಜಮಖಂಡಿ, ಬಳ್ಳಾರಿಯಲ್ಲೂ ಗೆಲುವು ನಮ್ಮದೇ. ಎಲ್ಲಾ ಕ್ಷೇತ್ರಗಳಲ್ಲೂ ನಮಗೆ ಬಹುಮತ ಸಿಗಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.