ರಾಶಿಗಟ್ಟಲೇ ಆಧಾರಕಾರ್ಡ ಪತ್ತೆ ಪ್ರಕರಣ: ತನಿಖೆಗೆ ಆದೇಶ

ಶುಕ್ರವಾರ, 13 ಜುಲೈ 2018 (15:25 IST)
ಪಿಬಿ ರಸ್ತೆಯಲ್ಲಿರುವ ಭವಾನಿ ಬಾರ್ ನಲ್ಲಿ ಪತ್ತೆಯಾಗಿದ್ದ ರಾಶಿ ಗಟ್ಟಲೇ ಆಧಾರ ಕಾರ್ಡಗಳು ನಕಲಿ ಇರುವ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ರಾಶಿಗಟ್ಟಲೆ ಸಿಕ್ಕ ಆಧಾರ್ ಕಾರ್ಡ್ ಪತ್ತೆ ಪ್ರಕರಣ ಕುರಿತು ಅಂಚೆ ಕಚೇರಿ ಅಧಿಕಾರಿಗಳು
ತನಿಖೆಗೆ ಆದೇಶಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಪಿಬಿ ರಸ್ತೆಯಲ್ಲಿರುವ ಭವಾನಿ ಬಾರ್ ಮುಂಭಾಗದಲ್ಲಿ ಪತ್ತೆಯಾಗಿದ್ದ ಆಧಾರ್ ಕಾರ್ಡಗಳು, ನಕಲಿ ಆಧಾರ ಕಾರ್ಡ್ ಜಾಲ ಇರುವ ಶಂಕೆ ವ್ಯಕ್ತವಾಗಿವೆ. ಹೀಗಾಗಿ ತನಿಖೆಗೆ ಅಂಚೆ ಇಲಾಖೆ ತನಿಖೆಗೆ ಆದೇಶ ನೀಡಿದೆ. ಕುಡಿದು ಬಿದ್ದಿರುವ ವ್ಯಕ್ತಿ ಅಂಚೆ ಇಲಾಖೆಯ ಸಿಬ್ಬಂದಿ ಎಂದು ಅನುಮಾನ ವ್ಯಕ್ತಪಡಿದಿದ ಅಂಚೆ ಅಧಿಕಾರಿಗಳು.

ಬಾರ್ ಮುಂಭಾಗ ಸಿಕ್ಕ ಆಧಾರ್ ಕಾರ್ಡ್ ಗಳಲ್ಲಿ ಒಂದಕ್ಕೆ ಮಾತ್ರ ಪೋಸ್ಟಲ್ ಸ್ಟಾಂಪ್ ಹಚ್ಚಿದ ಹಿನ್ನಲೆ ಮತ್ತಷ್ಟು ಅನುಮಾನಗಳು ಮೂಡತೊಡಗಿವೆ. ಆಧಾರ್ ಕಾರ್ಡ್ ಹಂಚಿಕೆ ಮುಂಚೆ ಅಕ್ರಮ ನಡೆದಿದೆಯೋ ಎನ್ನುವ  ಅನುಮಾನ ಅಧಿಕಾರಿಗಳನ್ನು ಕಾಡುತ್ತಿದೆ. ತನಿಖೆ ನಡೆಸಿದ ನಂತರ ಸತ್ಯ ಬಯಲಿಗೆ ಬರಲಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ