ಪ್ರಖ್ಯಾತ ವೈದ್ಯರ ಹೆಸರಲ್ಲಿ ಚೀಟಿ ಬರೆಯುತ್ತಿದ್ದ ನಕಲಿ ವೈದ್ಯ ಅರೆಸ್ಟ್

ಮಂಗಳವಾರ, 10 ಜುಲೈ 2018 (16:01 IST)
ಪ್ರಖ್ಯಾತ ವೈದ್ಯರೊಬ್ಬರ ಆಸ್ಪತ್ರೆಯ ಔಷಧಿ ಚೀಟಿಯನ್ನು ನೀಡಿ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದ ನಕಲಿ ವೈದ್ಯನನ್ನು ಪೋಲಿಸರು ಬಂದಿಸಿದ್ದಾರೆ. ಹಾವೇರಿ ನಗರದ ಪ್ರಖ್ಯಾತ ವೈದ್ಯ ಡಾ.ಶಿಗಿಹಳ್ಳಿಯವರ ಹೆಸರಿನಲ್ಲಿ ಔಷಧಿ ಚೀಟಿಯನ್ನು  ಬರೆದುಕೊಡುತ್ತಿದ್ದ ಶಾಂತಪ್ಪ ಹುಲ್ಯಾಳ ನಕಲಿ ವೈದ್ಯನಾಗಿದ್ದು, ಬಿ ಎ ಪದವಿ ಮುಗಿಸಿ ಬಿ.ಎ.ಎಮ್.ಎಸ್ ಡಾಕ್ಟರ್ ಎಂದು ಹೇಳಿಕೊಂಡು ಚಿಕಿತ್ಸೆ ನೀಡುತ್ತಿದ್ದ.

ಈ ಬಗ್ಗೆ ಪ್ರಶ್ನಿಸಲು ಹೊದ ಡಾಕ್ಟರ್ ಶೀಗಿಹಳ್ಳಿಯವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾಗಿದ್ದನು. ಇನ್ನೂ ಪತ್ನಿ ಸರ್ಕಾರಿ ಶುಶಶ್ರೂಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಸರಕಾರಿ ಆಸ್ಫತ್ರೆಯ ಔಷಧಿಗಳನ್ನ ನೀಡಿ ಚಿಕಿತ್ಸೆ ನೀಡಲು ಮುಂದಾಗುತ್ತಿದ್ದಾನೆಂದು ಡಾ.ಶೀಗಿಹಳ್ಳಿ ಆರೋಪಿಸಿದ್ದಾರೆ. ಸದ್ಯ ಹಾವೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ