ಅದ್ದೂರಿ ದಸರಾ : ವಿದ್ಯುತ್ ದೀಪಾಲಂಕಾರದ ಬೆಳಕಲ್ಲಿ ಅಂಬಾರಿ
ಈ ಬಾರಿ ಜಂಬೂ ಸವಾರಿ ಮೆರವಣಿಗೆ ವಿದ್ಯುತ್ ದೀಪಾಲಂಕಾರದ ನಡುವೆ ಸಾಗಲಿರುವುದು ವಿಶೇಷ. ಮೆರವಣಿಗೆಗಾಗಿ ಕ್ಯಾಪ್ಟನ್ ಅಭಿಮನ್ಯು ಮತ್ತು ಟೀಂ ಭರ್ಜರಿ ತಾಲೀಮು ನಡೆಸುತ್ತಿವೆ.
ಹೌದು. ಕಳೆದ 2 ವರ್ಷಗಳ ಹಿಂದೆ ಇಡೀ ರಾಷ್ಟ್ರವನ್ನು ಬಿಟ್ಟು ಬಿಡದೇ ಕಾಡುತ್ತಿದ್ದ ಕೊರೋನಾದಿಂದ ದಸರಾ ಮಹೋತ್ಸವದ ಸಂಭ್ರಮ ಮಂಕಾಗಿ ಹೋಗಿತ್ತು. ದಸರಾ ಮಹೋತ್ಸವದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿದ್ದವು.
ಅಲ್ಲದೇ ದಸರಾ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆ ಕೇವಲ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಕೊರೋನಾ ಮಹಾಮಾರಿಯಿಂದ ನಾವುಗಳು ದೂರವಾಗಿರುವ ಕಾರಣ ದಸರಾ ಮಹೋತ್ಸವ ಎಂದಿನಂತೆ ವಿಜೃಂಭಣೆಯಿಂದ ಜರುಗಲಿದೆ.