ಅಪಾರ್ಟಮೆಂಟಿನಲ್ಲಿ ಹರೆಯದ ವಿದ್ಯಾರ್ಥಿಗಳು ಮಾಡ್ತಿದ್ರು ಅಂಥ ಕೆಲಸ

ಮಂಗಳವಾರ, 3 ಸೆಪ್ಟಂಬರ್ 2019 (18:38 IST)
ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಹಾಗು ಸಾಫ್ಟ್‌ವೇರ್ ಉದ್ಯೋಗಿಗಳು ವಾಸವಿದ್ದ ಅಪಾರ್ಟ್ಮೆಂಟ್ ನಲ್ಲಿ ನಡೆಯಬಾರದ ಕೆಲಸ ನಡೆಯುತ್ತಿತ್ತು.

ಅಪಾರ್ಟಮೆಂಟಿನ ಮೇಲೆ ಪೊಲೀಸರು ದಾಳಿ ನಡೆಸಿ  ಗಾಂಜಾ ಸೇವಿಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಗಾಂಜಾ ವಶಕ್ಕೆ ಪಡೆದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

ಆನೇಕಲ್ ಪಟ್ಟಣದಲ್ಲಿರುವ ಪ್ರತಿಷ್ಠಿತ ಅಲಯನ್ಸ್ ಕಾಲೇಜಿನ ವಿದ್ಯಾರ್ಥಿಗಳು ವಾಸವಿದ್ದ ಬ್ಯಾಗಡದೇನ ಹಳ್ಳಿ ಗೇಟ್ ಬಳಿಯ ವಿಬಿಎಚ್'ಸಿ ಅಪಾರ್ಟ್ಮೆಂಟ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಗಾಂಜಾ ಸೇವಿಸುತ್ತಿದ್ದ 8 ಜನ ವಿದ್ಯಾರ್ಥಿಗಳು, ಗಾಂಜಾ ಮಾರುತ್ತಿದ್ದ ಇಬ್ಬರು ಹಾಗೂ ಕೊಳ್ಳಲು ಬಂದಿದ್ದ 5 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನು ಪ್ರತಿಷ್ಠಿತ ಕಾಲೇಜಿಗೆ ಹೊರ ರಾಜ್ಯಗಳಿಂದ ವಿಧ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ ಕೆಲವರು ಗಾಂಜಾ ಮಾರಾಟ ಮಾಡುತ್ತಿದ್ದರು.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ