ಆತ ಅನಾಥ ಮಗುವಾಗಿದ್ದ.ತಂದೆ ತಾಯಿ ಇಲ್ಲದ ಕಂದನನ್ನ ಆ ದಂಪತಿ ದತ್ತು ಪಡೆದಿದ್ರು.ಬಾಲ್ಯದಿಂದಲೇ ಅಪ್ಪ ಅಮ್ಮನ ಪ್ರೀತಿ ಕೊಟ್ಟು ಸಾಕಿದ್ರು.ಆದ್ರೆ ಬೆಳೆದು ದೊಡ್ಡವನಾದ ಮೇಲೆ ತಂದೆ ತಾಯಿಗೆ ನೆರಳಾಗಲಿಲ್ಲ.ಬದಲಾಗಿ ಜೀವ ತೆಗೆಯೊ ಹಂತಕನಾಗಿಬಿಟ್ಟಿದ್ದ.ಉತ್ತಮ್ ಕುಮಾರ್.27 ವರ್ಷದ ಈ ಆಸಾಮಿ ಅನಾಥಶ್ರಮದಲ್ಲಿದ್ದ.ತಂದೆ ತಾಯಿಯ ಪ್ರೀತಿಯಿಂದ ವಂಚಿತನಾಗಿದ್ದ.ಆದ್ರೆ ಮಕ್ಕಳಿಲ್ಲದ ದಂಪತಿಯೊಬ್ಬರು ಆತನನ್ನ ದತ್ತು ಪಡೆದಿದ್ರು.ಬೆಳೆದು ದೊಡ್ಡವನಾದ ಆಸಾಮಿ ತಂದೆ ತಾಯಿಗೆ ನೆರಳಾಗೊ ಬದಲು ಮೃಗವಾಗಿದ್ದ.
ಪತ್ನಿ ಇಲ್ಲದ ಮಂಜುನಾಥ್ ಎಂಬ ವ್ಯಕ್ತಿ ಸ್ಥಿತಿವಂತ.ಸದಾಶಿವನಗರ ಸಮೀಪದ ಅಶ್ವತ್ಥನಗರದಲ್ಲಿ ಐದಾರು ಮನೆ ಕೂಡ ಹೊಂದಿದ್ದಾನೆ.ಆ ಮನೆಯನ್ನ ಬಾಡಿಗೆಗೆ ನೀಡಿದ್ದಾನೆ.ಹೀಗಿರುವಾಗ ಜನವರಿ 31 ರ ರಾತ್ರಿ 9.30 ಕ್ಕೆ ಬಾಡಿಗೆ ದಾರ ಮನೋಹರ್ ಪಾಂಡು ಲಮಾಣಿ ಎಂಬುವವರ ಮನೆಗೆ ಬಂದ ಉತ್ತಮ್ ಕುಮಾರ್ ಎಂಬ 27 ವರ್ಷದ ಯುವಕ.ಕುತ್ತಿಗೆ ಮೇಲೆ ಲಾಂಗ್ ಇಟ್ಟಿದ್ದ.ಇನ್ಮುಂದೆ ಬಾಡಿಗೆ ನನಗೆ ಕೊಡಬೇಕು.ಇಲ್ಲದಿದ್ದರೆ ಕೊಚ್ಚಿ ಕೊಂದು ಹಾಕಿತ್ತೇನೆ ಎಂದು ಬೆದರಿಸಿದ್ದ.ಅಷ್ಟೇ ಅಲ್ಲ ನಾನು ನನ್ನ ತಾಯಿಯನ್ನೇ ಬಿಟ್ಟಿಲ್ಲ.ಪೆಟ್ರೋಲ್ ಹಾಕಿ ಸುಟ್ಟು ಹಾಕಿ ಜೈಲಿಗೆ ಹೋಗಿ ಬಂದಿದ್ದೇನೆ.ನಿನ್ನನ್ನ ಬಿಡ್ತೀನಾ ಎಂದು ಬೆದರಿಸಿದ್ದ.ಅಷ್ಟೇ ಅಲ್ಲ ಮತ್ತೊಬ್ಬ ಬಾಡಿಗೆದಾರ ಮಸ್ತಾನ್ ಎಂಬುವವರಿಗೂ ಇದೇ ರೀತಿ ಹೆದರಿಸಿದ್ದ.ವಿಚಾರ ಗೊತ್ತಾಗಿ ಪೊಲೀಸರು ತೆರಳ್ತಿದ್ದಂತೆ ಹೈಡ್ರಾಮಾ ಮಾಡಿದ್ದ.ತಂದಿದ್ದ ಲಾಂಗ್ ಸಮೇತ ತನ್ನ ಮನೆಯೊಳಗೆ ಸೇರಿಬಿಟ್ಟಿದ್ದ.ಕೊನೆಗೆ 31 ರ ತಡರಾತ್ರಿ ಅಂದರೆ ಜನವರಿ 1 ರಂದು 12.30 ಕ್ಕೆ ಆತನನ್ನ ಬಂಧಿಸಿದ್ದ ಸದಾಶಿವನಗರ ಪೊಲೀಸರು ಆರ್ಮ್ಸ್ ಆ್ಯಕ್ಟ್ ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದು ಜೈಲಿಗಟ್ಟಿದ್ದಾರೆ.
ಆತನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಬೆಚ್ಚಿಬೀಳೊ ವಿಚಾರ ಹೊರಬಿದ್ದಿದೆ.ಉತ್ತಮ್ ಕುಮಾರ್ ಬಾಲ್ಯದಲ್ಲಿದ್ದಾಗ ಮಂಜುನಾಥ್ ದಂಪತಿ ದತ್ತು ಪಡೆದಿದ್ರು ಬೆಳೆದು ದೊಡ್ಡವನಾದ ಮೇಲೆ ಹುಚ್ಚಾಟ ಮೆರೆಯಲು ಪ್ರಾರಂಭಿಸಿದ್ದ.ತಾಯಿಯನ್ನ ಹಣ ಕೊಡುವಂತೆ ಪೀಡಿಸ್ತಿದ್ದ.ಊಟ ಸರಿ ಇಲ್ಲ ಅಂತಾ ಜಗಳ ತೆಗಿತಿದ್ದ ಕೊನೆಗೆ 2018 ರಲ್ಲಿ ಸಾಕಿ ಸಲಹಿದ್ದ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದ.ಘಟನೆ ಸಂಬಂಧ ಸದಾಶಿವನಗರದಲ್ಲಿ ಕೇಸ್ ದಾಖಲಾಗಿತ್ತು.ಕಂಬಿ ಹಿಂದೆ ಇದ್ದ ಆಸಾಮಿ ಒಂದೂವರೆ ವರ್ಷದ ಹಿಂದೆ ಜೈಲಿನಿಂದ ಹೊರಬಂದಿದ್ದ.ಬಂದ ಬಳಿಕ ತಂದೆಗೂ ಹಣಕ್ಕಾಗಿ ಪೀಡಿಸ್ತಿದ್ದ.ಕೊಡದಿದ್ದಕ್ಕೆ ಬಾಡಿಗೆದಾರರ ಬಳಿ ಬಾಡಿಗೆ ಪಡೆಯಲು ಮುಂದಾಗಿದ್ದ ಕೊಡದಿದ್ದಕ್ಕೆ ಲಾಂಗ್ ಇಟ್ಟು ಬೆದರಿಕೆ ಹಾಕಿದ್ದಾನೆ.