12 ವರ್ಷದ ನಂತರ ಕೊಲೆ ಆರೋಪಿಯೊಬ್ಬ ಪೊಲೀಸರ ಆ್ಯಪ್ ಮೂಲಕ ಪತ್ತೆ

ಗುರುವಾರ, 17 ನವೆಂಬರ್ 2022 (13:34 IST)
12 ವರ್ಷದ ನಂತರ ಕೊಲೆ ಆರೋಪಿಯೊಬ್ಬ ಪೊಲೀಸ್ರ ಆ್ಯಪ್ ಮೂಲಕ ಪತ್ತೆಯಾಗಿದ್ದಾನೆ. ಪೊಲೀಸ್ರು ನೂತನ ತಂತ್ರಜ್ಞಾನ M.CCTNS ಆಪ್ ಮುಖಾಂತರ ಕೊಲೆ ಆರೋಪಿ ಪತ್ತೆಯಾಗಿದ್ದಾನೆ.ಇತ್ತೀಚೆಗೆ ಅಷ್ಟೇ M.CCTNS ಆಪ್ ನ ಪೊಲೀಸ್ರು ಬಳಕೆ ಮಾಡುತ್ತಿದ್ದರು.ಇದರಲ್ಲಿ ಪ್ರತಿ ಆರೋಪಿಯ ಪಿಂಗರ್ ಪ್ರಿಂಟ್ ಜೊತೆಗೆ ಆತನ ಮಾಹಿತಿ ಈ ಆಪ್ ನಲ್ಲಿ ಇರುತ್ತೆ. ಇದೇ ಬೇಸ್ ನಲ್ಲಿ ಆರೋಪಿ ಪತ್ತೆಯಾಗಿದ್ದು, ಯಶವಂತಪುರ  ಪಿಎಸ್ ಐ ರಾಜು ರಾತ್ರಿ ಗಸ್ತಿನಲ್ಲಿದ್ದಾಗ ಅನುಮಾನಸ್ಫಾದವಾಗಿ ಓಡಾಡ್ತಿದ್ದವನ ಪ್ರಿಂಟ್ ಕಲೆಕ್ಟ್ ಚೆಕ್ ಮಾಡಿದಾಗ ಆರೋಪಿಯ ಕ್ರೈ ಹಿಸ್ಟರಿ ರಿವಿಲ್ ಆಗಿದೆ.
 
2015ರಲ್ಲಿ ತಿಗಳರಪಾಳ್ಯದ ಬಾಲಜಿನಗರದಲ್ಲಿ ಶಂಕರಪ್ಪ ಎಂಬುವವರಮ್ನ ಇದೇ ರಮೇಶ ಅಂಡ್ ಕೊಲೆ ಮಾಡಿ ಜೈಲು ಸೇರಿದ್ರು. ಜೈಲಿನಿಂದ ಬಿಡುಗಡೆಯಾಗಿದ್ದ ರಮೇಶ ಪೊಲೀಸ್ರ ಕೈಗೂ ಸಿಗದೆ ಕೊರ್ಟ್ ಗೂ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆ 2010ರಲ್ಲಿ ರಮೇಶ ವಿರುದ್ದ ಕೋರ್ಟ್ NDW (ನಾನ್ ಬೇಲಬಲ್ ವಾರೆಂಟ್) ಜಾರಿ ಮಾಡಿತ್ತು ಸದ್ಯ 12 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಆ್ಯಪ್ ಮೂಲಕ ಪತ್ತೆಯಾಗಿದ್ದಾನೆ. ಸದ್ಯ ಆರೋಪಿಯನ್ನ ಬ್ಯಾಡರಹಳ್ಲಿ ಪೊಲೀಸ್ರ ವಶಕ್ಕೆ ಒಪ್ಪಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ