ಬೆಸ್ಕಾಂ ಗ್ರಾಹಕರೇ ಎಚ್ಚರ ಎಚ್ಚರ ಎಚ್ಚರ..!

ಗುರುವಾರ, 17 ನವೆಂಬರ್ 2022 (12:26 IST)
ಜನರಿಗೆ ಪದೆ ಪದೆ ಶಾಕ್ ನೀಡಿ ಬೆಚ್ಚಿ ಬೀಳಿಸುವ ಬೆಸ್ಕಾಂನವರು ಇದೀಗ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ. ಬೆಸ್ಕಾಂ ಸಿಬ್ಬಂದಿ ಫ್ಯೂಸ್ ಕೀಳೋ ಬದಲು ಕನೆಕ್ಷನ್ ಕಟ್ ಮಾಡ್ತಾರೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ಬೆಸ್ಕಾಂನಿಂದ ಕನೆಕ್ಷನ್ ಕಟ್ ಪ್ರಯೋಗ ಮಾಡಲಾಗುತ್ತದೆ.ವಿದ್ಯುತ್ ಬಿಲ್ ಕಟ್ಟಲು ವಿಳಂಬ ಮಾಡುವವರಿಗೆ ದೊಡ್ಡ ಆಘಾತವೇ ಉಂಟಾಗಲಿದೆ. ಸಾಮಾನ್ಯವಾಗಿ ಅನೇಕರು 2 ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ವಿದ್ಯುತ್ ಬಿಲ್  ಕಟ್ಟುವ ಪದ್ಧತಿಯನ್ನು ರೂಢಿ ಮಾಡಿಕೊಂಡಿರುತ್ತಾರೆ.ಅಥವಾ ಕಾರಣಾಂತರಗಳಿಂದ ಕೆಲ ತಿಂಗಳು ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿರಲ್ಲ. ಈ ವೇಳೆ ಬೆಸ್ಕಾಂ ಅಧಿಕಾರಿಗಳು ಕರೆಂಟ್ ಫ್ಯೂಸ್ ತೆಗೆದು ಹೋಗುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ವಿಷಯ, ಆದ್ರೆ ವಿದ್ಯುತ್ ಬಿಲ್ ಕಟ್ಟಲು ವಿಳಂಬ ಮಾಡುವವರಿಗೆ ವಿದ್ಯುತ್ ಸಂಪರ್ಕದ ಲೈಸೆನ್ಸ್ ರದ್ದು ಮಾಡಲು ಬೆಸ್ಕಾಂ ಮುಂದಾಗಿದೆ.

  3 ತಿಂಗಳ ಒಳಗೆ ಬಿಲ್ ಕಟ್ಟಿ, ವಿದ್ಯುತ್ ಸಂಪರ್ಕ ಉಳಿಸಿಕೊಳ್ಳಿ ಎಂದು MD ಮಹಾಂತೇಶ್ ಬೀಳಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ಧಾರೆ. ಬೆಸ್ಕಾಂ ಗ್ರಾಹಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿದೆ. ವಿದ್ಯುತ್ ಸಂಪರ್ಕ ಒಪ್ಪಂದ ರದ್ದು ಮಾಡಿದ್ರೆ ಮತ್ತೆ ಹೊಸ ಅರ್ಜಿ ಹಾಕ್ಬೇಕು.ಯಾರಿಗೆ ಬಿಸಿ ತಟ್ಟುತ್ತೆ..?
 
ವಿದೇಶ ಪ್ರಯಾಣ ಮಾಡುವವರಿಗೆ ಕಷ್ಟ
*ಅಪಾರ್ಟ್ಮೆಂಟ್ನಲ್ಲಿ 2ಕ್ಕೂ ಹೆಚ್ಚು ಫ್ಲಾಟ್ ಹೊಂದಿರುವವರು
*ಐಟಿ ಟೆಕ್ಕಿಗಳು, ಬ್ಯುಸಿನೆಸ್ಮನ್ಗಳು ಸಂಕಷ್ಟಕ್ಕೆ ಸಿಲುಕ್ತಾರೆ
*3 ತಿಂಗಳ ಮೇಲೂ ಬಿಲ್ ಕಟ್ಟದಿದ್ರೆ ಫೋನ್ ಮಾಡಿ ಮಾಹಿತಿ
*ಫೋನ್ ಮಾಡಿದ್ರೂ ಸಂಪರ್ಕಕ್ಕೆ ಸಿಗದೇ ಇದ್ರೆ ಫ್ಯೂಸ್ ತೆಗೆದು ಎಚ್ಚರಿಕೆ
*ಫೋನ್ ಮೆಸೇಜ್, ಫ್ಯೂಸ್ ತಂತ್ರ ಫಲಿಸದೇ ಇದ್ದರೆ ಕರೆಂಟ್ ಕಟ್
*ಫ್ಯೂಸ್ ತಗೆದು ಒಂದು ವಾರಕ್ಕೆ ವಿದ್ಯುತ್ ಸಂಪರ್ಕ ಕಟ್
*ಗ್ರಾಹಕರು ಊರಿಗೆ ಹೋಗುವ ಮುನ್ನ ಬೆಸ್ಕಾಂಗೆ ಮಾಹಿತಿ ನೀಡಬೇಕು
*3 ತಿಂಗಳ ಮಿನಿಮಮ್ ವಿದ್ಯುತ್ ಶುಲ್ಕ ಮೊದಲೇ ಕಟ್ಟಬೇಕು
*ಬಿಲ್ ಕಟ್ಟದವರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಹೊಸ ಮಾರ್ಗ

ಬೆಸ್ಕಾಂ ಎಂಡಿಯ ಟ್ವೀಟ್ ಪೋಸ್ಟ್ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವು ಅಪಾರ್ಟ್ಮೆಂಟ್ ನಿವಾಸಿಗಳು ತಿಂಗಳುಗಳು ಕಳೆದ್ರೂ ಬಿಲ್ ಪಾವತಿ ಮಾಡ್ತಿರಲಿಲ್ಲ. ಹೀಗಾಗಿ ಇನ್ಮುಂದೆ ಈ ನಿಯಮವನ್ನ ಗ್ರಾಹಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ಬೆಸ್ಕಾಂನ ಜನರಲ್ ಮ್ಯಾನೇಜರ್ ನಾಗರಾಜು ತಿಳಿಸಿದ್ದಾರೆ. ಒಟ್ನಲ್ಲಿ ಬೆಸ್ಕಾಂ ಆರ್ಥಿಕ ಪರಿಸ್ಥಿತಿ ಸುಧಾರಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸಿದ್ದು , ಇದಕ್ಕೆ ಬೆಸ್ಕಾಂ ಗ್ರಾಹಕರಿಗೆ ಹೊರೆಯಾಗುತ್ತಿದೆ. ಇನ್ನು ನೀವು ಬಿಲ್ ಪಾವತಿಸಿಲ್ಲ ಅಂದ್ರೆ ಅದನ್ನು ಆದಷ್ಟು ಬೇಗ ಮಾಡಿ ಇಲ್ಲ ನಿಮ್ಮ ಲೈಸೆನ್ಸ್ ರದ್ದು ಆಗುವುದರಲ್ಲಿ ಸಂಶಯವೇ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ