ನಾಲ್ಕು ವರ್ಷದ ನಂತರ ಶ್ವಾನಗಳ ಗಣತಿ ಶುರು,,,!

ಗುರುವಾರ, 22 ಜೂನ್ 2023 (17:52 IST)
ಬೆಂಗಳೂರು ಮಹಾನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಟ್ಟಹಾಕಲು ಪಾಲಿಕೆ ಒಂದಲ್ಲ ಒಂದು ಕಸರತ್ತು ಮಾಡುತ್ತಲ್ಲೇ ಇರುತ್ತದೆ,ಕಳೆದ 2019ರ ಹಿಂದಿನ ಸಮೀಕ್ಷೆಯಲ್ಲಿ ಸುಮಾರು ಮೂರು ಲಕ್ಷ ಬೀದಿ ನಾಯಿಗಳನ್ನು ಗುರುತಿಸಲಾಗಿತ್ತು, ಇದೀಗ ನಾಲ್ಕು ವರ್ಷಗಳ ನಂತರ ಬಿಬಿಎಂಪಿಯು ಶ್ವಾನಗಳ ಗಣತಿಯನ್ನು ಲೆಕ್ಕಾಚಾರ ಮಾಡಲು ತೀರ್ಮಾನಿಸಿದೆ,ಜೊತೆಗೆ ಬಿಬಿಎಂಪಿ ತನ್ನ ಲಸಿಕೆ ಮತ್ತು ಸಂತಾನಶಕ್ತಿಯಿಂದ ನಾಯಿಗಳು ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ವಗುತ್ತದೆ ಎಂದು, ಇದೇ ಜೂನ್ ಅಂತ್ಯದೊಳಗೆ ಶ್ವಾನಗಳ ಗಣತಿಯ ಲೆಕ್ಕಾಚಾರಕ್ಕೆ ಫೀಲ್ಡ್ ಗಿಳಿಯಲು ಪಾಲಿಕೆ ಸಜ್ಜಾಗಿರುವಂತದ್ದು.ಇನ್ನೂ ಬಿಬಿಎಂಪಿ ಹಾಗೂ ರಾಜ್ಯ ಪಶುಸಂಗೋಪನಾ ಇಲಾಖೆಯು 100 ನಾಯಿಗಳಿಗೆ ಮೈಕ್ರೋಚಿಪ್ಗಳನ್ನು ಅಳವಡಿಸುವ ತನ್ನ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದೆ.

ನಾಯಿಯ ಕತ್ತಿನ ಮೈಕ್ರೋಚಿಪ್ ಅನ್ನು ಸ್ಕ್ಯಾನ್ ಮಾಡಿದಾಗ, ಅದರ ಲಸಿಕೆ ಮತ್ತು ಸಂತಾನಶಕ್ತಿ ಹರಣದಂತಹ ವಿವರಗಳು ಲಭ್ಯವಾಗುತ್ತವೆ. ಈ ಆಧಾರದ ಮೇಲೆ ಬಿಬಿಎಂಪಿಯ ವಾರ್ಷಿಕ ಲಸಿಕೆ ಕಾರ್ಯಕ್ರಮದಿಂದ ಹೆಚ್ಚಿನ ಪ್ರಮಾಣದ ನಾಯಿಗಳು ತಪ್ಪಿಸಿಕೊಂಡರೆ, ಕೆಲವು ಒಂದಕ್ಕಿಂತ ಹೆಚ್ಚು ಬಾರಿ ಲಸಿಕೆಯನ್ನು ಪಡೆಯುತ್ತವೆ. ಆದ್ದರಿಂದ ಮೈಕ್ರೋಚಿಪ್ ಡೇಟಾವು ಸರಿಯಾದ ವ್ಯಾಕ್ಸಿನೇಷನ್ ಅನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ,ಇದಕ್ಕಾಗಿಪ್ರತಿ ತಂಡದಲ್ಲೂ ಇಬ್ಬರು ಸದಸ್ಯರು ನೇಮಕಮಾಡಲಾಗಿದೆ, ಒಬ್ಬರು ವಾಹನವನ್ನು ಓಡಿಸುತ್ತಾರೆ. ಇನ್ನೊಬ್ಬರು ಬೀದಿ ನಾಯಿಗಳ ಡೇಟಾವನ್ನು ಗುರುತಿಸಿ ಅಪ್ಲೋಡ್ ಮಾಡುತ್ತಾರೆ, ಎಂದು ಬಿಬಿಎಂಪಿಯ ಜಂಟಿ ನಿರ್ದೇಶಕ (ಪಶುಸಂಗೋಪನೆ) ಡಾ ಕೆಪಿ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ