ಗೃಹಲಕ್ಷ್ಮಿ ಮಾತ್ರವಲ್ಲ, ಕಳೆದ ಮೂರು ತಿಂಗಳಿನಿಂದ ಅನ್ನಭಾಗ್ಯ ಹಣವೂ ಬರ್ತಿಲ್ಲ

Krishnaveni K

ಸೋಮವಾರ, 16 ಸೆಪ್ಟಂಬರ್ 2024 (09:58 IST)
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಹಣ ಸರಿಯಾಗಿ ಖಾತೆಗೆ ಬರುತ್ತಿಲ್ಲ ಎಂದು ಸಿಟ್ಟಾಗಿದ್ದ ಜನತೆಗೆ ಈಗ ಮತ್ತೊಂದು ಬರೆ. ಅನ್ನಭಾಗ್ಯ ಹಣವೂ ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳಿಗೆ ಜಮೆ ಆಗಿಲ್ಲ.

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ಸಿದ್ದರಾಮಯ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ ಅಕ್ಕಿ ಕೊರತೆಯಿಂದಾಗಿ 5 ಕೆ.ಜಿ. ಅಕ್ಕಿ ಮತ್ತು ಉಳಿದ 5 ಕೆ.ಜಿ ಬಾಬ್ತು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿತ್ತು.

ಆದರೆ ಕಳೆ ಮೂರು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಿಲ್ಲ. ತಲಾ 34 ರೂ.ನಂತೆ ಪ್ರತೀ ತಿಂಗಳು 170 ರೂ. ಫಲಾನುಭವಿಗಳಿಗೆ ನೀಡಬೇಕಿದೆ. ಆದರೆ ಕಳೆದ ಮೂರು ತಿಂಗಳಿನಿಂದ ಹಣ ಬರದೇ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಪ್ರತೀ ದಿನ ಖಾತೆ ಪರಿಶೀಲಿಸುವುದೇ ಆಗಿದೆ.

ಆದರೆ ಹಣ ಬಂದಿಲ್ಲ ಎಂದು ಸರ್ಕಾರದ ಮೇಲೆ ಆಕ್ರೋಶಗೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳ ಪೈಕಿ ಎರಡು ಯೋಜನೆಗಳ ಕತೆ ಇದೇ ಆಗಿದೆ. ಸರ್ಕಾರಕ್ಕೆ ಉಚಿತ ಭಾಗ್ಯಗಳನ್ನು ಕೊಡಿ ಎಂದು ನಾವಾಗಿ ಕೇಳಿಲ್ಲ. ಕೊಡುತ್ತೇವೆ ಎಂದಿರುವ ಸರ್ಕಾರ ಕೊಡದೇ ಹೀಗೆ ಮೋಸ ಮಾಡುತ್ತಿರುವುದು ಯಾಕೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ