ಮೇಟಿ ರಾಸಲೀಲೆ ನಂತ್ರ ಶಾಸಕ ಜಿ.ಟಿ.ಪಾಟೀಲ್ ರಾಸಲೀಲೆ?

ಶುಕ್ರವಾರ, 23 ಡಿಸೆಂಬರ್ 2016 (14:23 IST)
ಮಾಜಿ ಸಚಿವ ಎಚ್.ವೈ.ಮೇಟಿ ರಾಸಲೀಲೆ ಪ್ರಕರಣದ ಸಿಡಿ ಬಹಿರಂಗವಾದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದ ಮತ್ತೊಬ್ಬ ಶಾಸಕನಿಗೆ ನಡುಕ ಶುರುವಾಗಿದೆ.
 
ಈ ಕಾರಣದಿಂದಲೇ ಕಾಂಗ್ರೆಸ್ ಪಕ್ಷದ ಬೀಳಗಿ ಶಾಸಕ ಜೆ.ಟಿ.ಪಾಟೀಲ್ ತನ್ನ ವಿರುದ್ಧದ ಯಾವುದೇ ರಾಸಲೀಲೆ ಸಿಡಿಯನ್ನು ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ವರದಿಯಾಗಿದೆ. 
 
ಶಾಸಕರ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಜೆ.ಟಿ.ಪಾಟೀಲ್ ವಿರುದ್ಧದ ಯಾವುದೇ ಅಶ್ಲೀಲ ಸಿಡಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಿದೆ ಎಂದು ವಿವರಿಸಿದೆ. 
 
ಇತ್ತೀಚೆಗಷ್ಟೇ ಎಚ್.ವೈ.ಮೇಟಿ ರಾಸಲೀಲೆ ವಿಡಿಯೋ ಸಿಡಿಯನ್ನು ದೆಹಲಿಯಲ್ಲಿ ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರು ಬಿಡುಗಡೆಗೊಳಿಸಿದ್ದರು. ಸಚಿವರ ರಾಸಲೀಲೆ ಸಿಡಿ ಬಿಡುಗಡೆಯಾಗುತಿದ್ದಂತೆ ನೈತಿಕ ಹೊಣೆ ಹೊತ್ತು ಅಬಕಾರಿ ಸಚಿವ ಎಚ್.ವೈ.ಮೇಟಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
 
ರಾಜ್ಯದ ಇಬ್ಬರು ಶಾಸಕರು ಹಾಗೂ ಪ್ರಭಾವಿ ಸಚಿವರ ರಾಸಲೀಲೆ ಸಿಡಿ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಆ ಸಿಡಿಗಳನ್ನು ಶ್ರೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಸ್ಫೋಟಕ ಮಾಹಿತಿ ಹೊರಹಾಕಿದ್ದರು. ಈ ನಿಟ್ಟಿನಲ್ಲಿ ಭಯಗೊಂಡು ಶಾಸಕ ಜೆ.ಟಿ.ಪಾಟೀಲ್ ಕೋರ್ಟ್ ಮೊರೆ ಹೋಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ