ಅಗ್ನಿಪಥ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ ಅಗ್ನಿವೀರರರಿಗೆ ಪೊಲೀಸ್ ಇಲಾಖೆ, ಸಿಎಆರ್ ಪಿಎಫ್, ಸಿಎಪಿಎಫ್ ಮತ್ತು ಸೇನೆಗಳಲ್ಲಿ ಶೇ.10ರಷ್ಟು ಮೀಸಲು ಘೋಷಿಸಲಾಗಿದೆ.
ಬಿಎಸ್ ಎಫ್, ಸಿಆರ್ ಪಿಎಫ್, ಐಟಿಬಿಪಿ ಮತ್ತು ಎಸ ಎಸ್ ಬಿ ಸೇರಿದಂತೆ ಸೇನೆಯ ೫ ವಿಭಾಗಗಳಲ್ಲಿ 73,219 ಉದ್ಯೋಗಗಳು ಖಾಲಿ ಆಗಲಿವೆ. ಪೊಲೀಸ್ ಇಲಾಖೆಯಲ್ಲಿ 18,124 ಉದ್ಯೋಗಗಳು ಸೃಷ್ಟಿಯಾಗಲಿವೆ. ಇದಲ್ಲದೇ 10 ಲಕ್ಷ ಉದ್ಯೋಗ ಅವಕಾಶ ಕಲ್ಪಿಸುವ ಸಿಎಪಿಎಫ್ ನಲ್ಲಿ ಕೂಡ ಶೇ.10ರಷ್ಟು ಮೀಸಲು ಕಲ್ಪಿಸಲಾಗುತ್ತಿದೆ.