ಬೆಂಗಳೂರು : ಲಾಕ್ಡೌನ್ ಆಗಿದ್ದೇ ತಡ ಇಡೀ ಬೆಂಗಳೂರು ಸ್ತಬ್ಧ ಆಗಿತ್ತು. ವಾಹನಗಳ ಓಡಾಟವೂ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು.
ಬೆಂಗಳೂರಿನ ಏರಿಯಾಗಳಲ್ಲಿ ನಡೆಯುತ್ತಿದ್ದ ಕಾಮಗಾರಿಗಳು ನಿಂತಿದ್ದವು. ಆದರೀಗ ಅನ್ಲಾಕ್ ಬಳಿಕ ರಸ್ತೆ, ಕಟ್ಟಡ ಮತ್ತು ಮೆಟ್ರೋ ಕಾಮಗಾರಿ ಶುರುವಾಗಿದೆ.
ಇದರಿಂದ ಧೂಳಿನ ಪ್ರಮಾಣ ಶೇಕಡಾ 30ರಷ್ಟು ಏರಿಕೆಯಾಗಿದ್ದು, ಧೂಳು ಜನರ ಶ್ವಾಸಕೋಶ ಸೇರಿ ಜನರ ಆರೋಗ್ಯ ಹಾಳಾಗುತ್ತಿದೆ. ಧೂಳಿನಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಮಟ್ಟವೂ ಹೆಚ್ಚಾಗಿದೆ.
2021-2022 ರ ಪ್ರಕಾರ ವಾಯುಮಾಲಿನ್ಯ ಮಟ್ಟ ಶೇಕಡಾ 70 ರಿಂದ 75ಕ್ಕೆ ಏರಿಕೆಯಾಗಿದೆ. ಆತಂಕಕಾರಿ ವಿಷಯ ಅಂದರೆ ವಾಯುಮಾಲೀನ್ಯದಿಂದ 2020ರಲ್ಲಿ ಬೆಂಗಳೂರುವೊಂದರಲ್ಲೇ 12 ಸಾವಿರ ಮಂದಿ ಮೃತಪಟ್ಟಿದ್ದಾರೆ.
ದೆಹಲಿಯಲ್ಲಿ ಕಳೆದ ವರ್ಷ 54 ಸಾವಿರ ಜನರು ಮೃತಪಟ್ಟಿದ್ದಾರೆ. ಆಗ್ನೇಯ ಏಷ್ಯಾ ಗ್ರೀನ್ಪೀಸ್ನ ವಾಯುಗುಣಮಟ್ಟ ವಿಶ್ಲೇಷಣೆಯಲ್ಲಿ ಈ ಮಾಹಿತಿ ಪ್ರಕಟವಾಗಿದೆ.