ಲಾಕ್ಡೌನ್‍ನ ಉದ್ಯೋಗ ನಷ್ಟ ಎಷ್ಟಿದೆ?!

ಮಂಗಳವಾರ, 30 ನವೆಂಬರ್ 2021 (10:00 IST)
ಹೊಸದಿಲ್ಲಿ : ಕೊರೊನಾ ವೈರಸ್ ಸೋಂಕಿನ ಕಾರಣದಿಂದ ದೇಶಾದ್ಯಂತ 2020ರ ಮಾರ್ಚ್ ತಿಂಗಳಲ್ಲಿ ಲಾಕ್ಡೌನ್ ಜಾರಿಯಾದ ಮೊದಲ ಮೂರು ತಿಂಗಳು.
ಸಂಘಟಿತ ವಲಯದಲ್ಲಿ ಶೇ 7.5ರಷ್ಟು ಉದ್ಯೋಗ ಕಡಿತ ಉಂಟಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ಗೆ ತಿಳಿಸಿದೆ. 2020ರ ಜೂನ್ ಬಳಿಕದ ಉಂಟಾದ ಉದ್ಯೋಗ ಕಡಿತದ ಕುರಿತು ತನ್ನ ಬಳಿ ದಾಖಲೆಗಳಿಲ್ಲ ಎಂದು ಹೇಳಿದೆ.
ಲೋಕಸಭೆಯಲ್ಲಿ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರವಾಗಿ ಅಂಕಿ ಅಂಶಗಳನ್ನು ನೀಡಿದೆ. ತೀವ್ರ ಕಟ್ಟುನಿಟ್ಟಾದ ಕೋವಿಡ್ 19 ಲಾಕ್ಡೌನ್ ಕಾರಣದಿಂದ ಮಹಿಳೆಯರು ಉದ್ಯೋಗ ಕಳೆದುಕೊಂಡ ಬಗ್ಗೆ ಸರ್ಕಾರಕ್ಕೆ ಅರಿವು ಇದೆಯೇ ಎಂದು ಸಿಂಗ್ ಪ್ರಶ್ನಿಸಿದ್ದರು.
2020-21ನೇ ಸಾಲಿನ ಮೊದಲ ತ್ರೈಮಾಸಿಕ ಉದ್ಯೋಗ ಸಮೀಕ್ಷೆಯ ದಾಖಲೆಗಳನ್ನು ಉಲ್ಲೇಖ ಮಾಡಿರುವ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ, ಉತ್ಪಾದನೆ, ಸಾರಿಗೆ ಮತ್ತು ನಿರ್ಮಾಣ ವಲಯಗಳು ಸೇರಿದಂತೆ ಒಟ್ಟು ಒಂಬತ್ತು ವಲಯಗಳಲ್ಲಿನ ಪುರುಷ ಉದ್ಯೋಗಿಗಳ ಸಂಖ್ಯೆ 21 ಮಿಲಿಯನ್ನಿಂದ 20 ಮಿಲಿಯನ್ಗೆ ಕುಸಿದಿದೆ. ಹಾಗೆಯೇ ಮಹಿಳಾ ಉದ್ಯೋಗಿಗಳ ಸಂಖ್ಯೆ 9 ಮಿಲಿಯನ್ನಿಂದ 8.3 ಮಿಲಿಯನ್ಗೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ