ಏರ್ ಷೋ: ಕಾಂಗ್ರೆಸ್ ನಾಯಕರಿಂದ ಗೊಂದಲವೆಂದ ಯಡಿಯೂರಪ್ಪ

ಮಂಗಳವಾರ, 14 ಆಗಸ್ಟ್ 2018 (15:53 IST)
ಏರ್ ಶೋ ಲಖ್ನೋಗೆ ಶಿಫ್ಟ್ ಆಗಲ್ಲ. ಹಾಗಂತ ಹೇಳಿದ್ದು ಯಾರು? ಅಂತ ಗದಗನಲ್ಲಿ ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಗದಗನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಏರ್ ಶೋ ಬೆಂಗಳೂರು ಬಿಟ್ಟು ಹೋಗದಂತೆ ರಾಜ್ಯದ ಬಿಜೆಪಿಯ ಎಲ್ಲಾ ಸಂಸದರು, ಕೇಂದ್ರ ಸಚಿವರು, ಮುಖಂಡರು ಪ್ರಯತ್ನ ಮಾಡ್ತೀವಿ. ಆದ್ರೆ ಡಿಸಿಎಂ ಡಾ.ಜಿ.ಪರಮೇಶ್ವರ ಹಾಗೂ ಸಚಿವ ಡಿ.ಕೆ ಶಿವಕುಮಾರ್ ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ. ಈಗಾಗಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅದರ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಉತ್ತರ ಪ್ರದೇಶದವರ ಬೇಡಿಕೆ ಅಷ್ಟೇ. ಅದು ಫೈನಲ್ ಅಲ್ಲ ಅನ್ನುವುದನ್ನ ಸಿರ್ಮಲಾ ಸೀತಾರಾಮ್ ಅವರು ಹೇಳಿದ್ದಾರೆ. ಹೀಗಾಗಿ ಸ್ಥಳಾಂತರ ಬಗ್ಗೆ ಚರ್ಚೆ ಸರಿಯಲ್ಲ ಅಂತ ಕಾಂಗ್ರೆಸ್ ವಿರುದ್ಧ ಬಿ.ಎಸ್.ವೈ ಕಿಡಿಕಾರಿದ್ದಾರೆ.

ಇನ್ನು ಸಿಎಂ ಭತ್ತ ನಾಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ.ಎಸ್.ವೈ, ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ತೀವ್ರ ಬರಗಾಲ ಇದೆ. ರಾಜಕೀಯ ದೊಂಬರಾಟ ಬಿಟ್ಟು ರೈತರ ಜ್ವಲಂತ ಸಮಸ್ಯೆಗಳನ್ನು ಸಿಎಂ ಕುಮಾರಸ್ವಾಮಿ ಇತ್ಯರ್ಥ ಮಾಡಲಿ. ನಾಟಿ ಮಾಡಿದ್ರೆ ರೈತರ ಸಮಸ್ಯೆ ಬಗೆಹರಿಯಲ್ಲ. ಉತ್ತರ ಕರ್ನಾಟಕದಲ್ಲಿ ತೀವ್ರ ಬರಗಾಲ ಇದೆ. ಕುಮಾರಸ್ವಾಮಿ ಉತ್ತರ ಕರ್ನಾಟಕ ಪ್ರವಾಸ ಮಾಡಿ ರೈತರ ಸಮಸ್ಯೆ ಅರಿಯಲಿ ಅಂತ ಸಿಎಂ ಗೆ ಸಲಹೆ ನೀಡಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ