ಅಯ್ಯೋ ವಿಧಿಯೇ… 5 ತಿಂಗಳ ಗರ್ಭಿಣಿಗೆ ಕೊರೊನಾ ಸೋಂಕು

ಬುಧವಾರ, 8 ಏಪ್ರಿಲ್ 2020 (20:15 IST)
ಮಹಾಮಾರಿ ಕೊರೊನಾ ವೈರಸ್ ಇದೀಗ 5 ತಿಂಗಳ ಗರ್ಭಿಣಿಯಲ್ಲಿ ಕಾಣಿಸಿಕೊಂಡಿದೆ.   

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೊಂದು ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು 9 ಜನರು ಕೋವಿಡ್ – 19 ಗೆ ತುತ್ತಾಗಿದ್ದಾರೆ.

ಭಟ್ಕಳದ 26 ವರ್ಷ ವಯಸ್ಸಿನ ಮಹಿಳೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಐದು ತಿಂಗಳು ಗರ್ಭಿಣಿಯಾಗಿರುವ  ಈಕೆಗೆ ಇಬ್ಬರು ಮಕ್ಕಳಿದ್ದು, ಪತಿ ದುಬೈನಿಂದ ಇತ್ತಿಚೆಗೆ ವಾಪಸ್ಸಾಗಿದ್ದಾನೆ. ಆದರೆ ಮಹಿಳೆಯ ಪತಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ.

ಈಕೆಯ ಪತಿ ಮಾ.17 ರಂದು ದುಬೈನಿಂದ ಮುಂಬೈಗೆ ವಿಮಾನದ ಮೂಲಕ ಆಗಮಿಸಿ, ಮುಂಬೈನಲ್ಲಿ ನಾಲ್ಕು ದಿನಗಳ ಕಾಲ ಉಳಿದಿದ್ದ. ನಂತರ ರೈಲಿನಲ್ಲಿ ಭಟ್ಕಳಕ್ಕೆ ಆಗಮಿಸಿದ್ದ. ದುಬೈನಿಂದ ಆಗಮಿಸಿದ್ದ ಹಿನ್ನೆಲೆಯಲ್ಲಿ ಆತನ ಕೈ ಮೇಲೆ ಹೋಂ ಕ್ವಾರಂಟೈನ್ ಮುದ್ರೆ ಹಾಕಲಾಗಿತ್ತು.  ಇತ್ತಿಚೆಗೆ ಆತನ ಗರ್ಭಿಣಿ ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ.

ಈ ಸಮಯದಲ್ಲಿ ಪತಿಯ ಕೈಮೇಲೆ ಹೋಂ ಕ್ವಾರಂಟೈನ್ ಮುದ್ರೆ ಇರುವುದನ್ನು ಗಮನಿಸಿದ ವೈದ್ಯರು, ಇಬ್ಬರನ್ನು ಭಟ್ಕಳ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಪರೀಕ್ಷೆಯಲ್ಲಿ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಪತಿಯ ವರದಿಯಲ್ಲಿ ನೆಗೆಟಿವ್ ಬಂದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ