ಮಾಸ್ಕ್‌ಮ್ಯಾನ್‌ನ ಮಂಪರು ಪರೀಕ್ಷೆಗೆ ಒಳಪಡಿಸಿದ್ರೆ ಎಲ್ಲ ಸಂಚು ಬಯಲಾಗುತ್ತೆ: ಲಕ್ಷ್ಮಣ ಸವದಿ

Sampriya

ಭಾನುವಾರ, 17 ಆಗಸ್ಟ್ 2025 (16:54 IST)
Photo Credit X
ಬೆಳಗಾವಿ: ಧರ್ಮಸ್ಥಳ ಬುರುಡೆ ಪ್ರಕರಣದ ಮಾಸ್ಕ್‌ಮ್ಯಾನ್‌ನ ಮಂಪರು ಪರೀಕ್ಷೆಯನ್ನು ಮಾಡಬೇಕೆಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಒತ್ತಾಯಿಸಿದ್ದಾರೆ.

ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ರೀತಿ ಮಾಡುವ ಮೂಲಕ ಸುಳ್ಳ ಆರೋಪವನ್ನು ಎಸಗುವವರಿಗೆ ಎಚ್ಚರಿಕೆಯ ಗಂಟೆಯಾಗಬೇಕು. ಮುಸುಕುದಾರಿಯನ್ನು ಮುಂದಿಟ್ಟು ಯಾರಾದರೂ ಒಳಸಂಚು ಮಾಡುತ್ತಿದ್ದರೆ ಅವರು ಯಾರೆಂದು ತಿಳಿಯಬೇಕು. ಒಳಸಂಚು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 

ಈ ಮೂಲಕ ಮುಸುಕುದಾರಿಯ ಹಿನ್ನೆಲೆಯನ್ನು ಪತ್ತೆಯಾಗಬೇಕು.  ತನಿಖೆಗಾಗಿ ಸರ್ಕಾರ ಮಾಡಿದ ವೆಚ್ಚವನ್ನು ವಸೂಲಿ ಮಾಡಬೇಕು. 

ಮಂಪರು ಪರೀಕ್ಷೆಯಲ್ಲಿ ಅತನ ಒಪ್ಪಿಗೆ ಬೇಕಾಗುತ್ತದೆ. ಬೇರೆ ದಾರಿಯಲ್ಲಿ ತನಿಖೆ ಮಾಡಿ ಸಂಚು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದು ಸರ್ಕಾರ ಅಥವಾ ಪಕ್ಷದ ನಿಲುವಲ್ಲ ಇದು ನನ್ನ ವೈಯಕ್ತಿಕ ಹೇಳಿಕೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ