ದಾಖಲೆಗಳೆಲ್ಲ ಉಡೀಸ್ ಮಾಡಿದ ಜೇಮ್ಸ್

ಶುಕ್ರವಾರ, 18 ಮಾರ್ಚ್ 2022 (20:22 IST)
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ಜೇಮ್ಸ್' ಗಳಿಕೆಯಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಮೊದಲ ದಿನದ  'ಕೆಜಿಎಫ್' ಹಿಂದಿಕ್ಕಿದ 'ಜೇಮ್ಸ್' 30 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.
ಪುನೀತ್ ಹುಟ್ಟುಹಬ್ಬದ ದಿನವಾದ ಮಾರ್ಚ್ 17 ರಂದು ವಿಶ್ವದಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾದ 'ಜೇಮ್ಸ್' ಮೊದಲ ದಿನ ಸುಮಾರು 30 -35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.
 
'ಜೇಮ್ಸ್' ಚಿತ್ರದ ಡಿಜಿಟಲ್ ರೈಟ್ಸ್ 40 ಕೋಟಿ ರೂ.ಗೆ ಮಾರಾಟವಾಗಿವೆ ಎನ್ನಲಾಗಿದೆ. ಇನ್ನು ಸುಮಾರು 10 -15 ಕೋಟಿ ರೂ.ಗೆ ಸ್ಯಾಟಲೈಟ್ ಹಕ್ಕುಗಳು ಮಾರಾಟವಾಗಿದ್ದು, ಹಿಂದಿ ಡಬ್ಬಿಂಗ್ ರೈಟ್ಸ್, ವಾಹಿನಿಗೆ ಸಿನಿಮಾ ಮಾರಾಟ ಸೇರಿದಂತೆ ಈಗಾಗಲೇ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಮೊದಲ ದಿನ ದಾಖಲೆಯ ಕಲೆಕ್ಷನ್ ಮಾಡಿದ 'ಜೇಮ್ಸ್' ಎರಡನೇ ದಿನವೂ ಹೆಚ್ಚುಕಡಿಮೆ ಅಷ್ಟೇ ಗಳಿಕೆ ಕಂಡಿದೆ. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಕೂಡ 'ಜೇಮ್ಸ್' ಗಳಿಕೆಯಲ್ಲಿ ದಾಖಲೆ ಬರೆಯುವುದು ನಿಶ್ಚಿತವೆನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ