ಭಾರತ್ ಬಂದ್ ಯಶಸ್ಸಿಗೆ ಎಲ್ಲಾ ಸಂಘಟನೆಗಳ ಬೆಂಬಲ ವ್ಯಕ್ತ

ಶನಿವಾರ, 25 ಸೆಪ್ಟಂಬರ್ 2021 (22:27 IST)
ಬೆಂಗಳೂರು ಕೇಂದ್ರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೆಪ್ಟೆಂಬರ್ 27ರಂದು ಸಂಯುಕ್ತ ಕಿಸಾನ್ ಮೋರ್ಚಾ ಭಾರತ ಬಂದ್‌ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘಟಣೆಗಳು ಕರ್ನಾಟಕ ಬಂದ್ ನಡೆಸಲು ಮುಂದಾಗಿದ್ದು ಬಂದ ಯಶಸ್ಸಿಗೆ ಎಲ್ಲಾ ಸಂಘಟನೆಗಳ ಬೆಂಬಲ ವ್ಯಕ್ತವಾಗಿದೆ ಎಂದು ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ಕಳೆದ ಹತ್ತು ತಿಂಗಳಿನಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಯಾರದೇ ಕ್ರಮ ಕೈಗೊಂಡಿಲ್ಲ, ದೇಶದ ರೈತ ಸಮುದಾಯ ಭಾರತ್ ಬಂದ್ ಮಾಡುವ ಮೂಲಕ ಮತ್ತೊಂದು ಹೋರಾಟ ನಡೆಸುತ್ತಿದೆ. ರೈತ ಸಂಘದ ಮುಖಂಡ  ನಾಗೇಂದ್ರ ಮನವಿ ಮಾಡಿದ್ದಾರೆ.
 
ಕಾರ್ಮಿಕ , ದಲಿತ, ಮಹಿಳ, ವಿದ್ಯಾರ್ಥಿ ಸಂಘಟನೆಗಳು,ವಿವಿಧ ವಿವಿಧ ಕನ್ನಡಪರ ಸಂಘಟನೆಗಳು ಸೇರಿದಂತೆ ನೂರಾರು ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಳ್ಳಳಿದ್ದಾರೆ ಎಂದು ಹೇಳಿದ್ದಾರೆ.
 
ನೈತಿಕ ಬೆಂಬಲ: 
 
ಹೋಟೆಲ್ ಮಾಲೀಕರು, ಖಾಸಗಿ ಬಸ್ ಚಾಲಕರು, ಮಾಲ್ ಗಳು, ಚಿತ್ರ ಮಂದಿರಗಳು, ಖಾಸಗಿ ಶಾಲೆಗಳ ಸಂಘಟನೆಗಳು,ಆಟೋ ಕ್ಯಾಬ್ ಚಾಲಕರು  ಬಂದ್‌ಗೆ ನೈತಿಕ ಬೆಂಬಲ ಘೋಷಿಸಿವೆ. ಕೋವಿಡ್  ಸಂಕಷ್ಟದಿಂದ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಹಾಗಾಗಿ ಬಂದ್‌ನಲ್ಲಿ ಪಾಲ್ಗೊಳ್ಳದೆ ನೈತಿಕ ಬೆಂಬಲ ಸೂಚಿಸುವುದಾಗಿ ವರ್ತಕರ ಈಗಾಗಲೇ ತಿಳಿಸಿದ್ದಾರೆ.
 
ಕೋಡಿಹಳ್ಳಿ ಚಂದ್ರಶೇಖರ್ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮನವಿ: 
 
ಬಂದ್ ಯಶಸ್ವಿ ಗೊಳಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕೂಡ ಹೇಳಿದ್ದಾರೆ.
 
ಬೈಟ್ಸ್: ಬಡಗಲಪುರ ನಾಗೇಂದ್ರ, ಅದರ್ಶ ಅಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ ಸಿ ರಾವ್

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ