ರೈತ ಸಂಘಟನೆ ನೇತೃತ್ವದಲ್ಲಿ ಎರಡೂವರೆ ಸಾವಿರ ಜನರು ಶೇಷಾದ್ರಿ ರಸ್ತೆಯ ಮೌರ್ಯ ವೃತ್ತದಲ್ಲಿ ಜಮಾವಣೆಗೊಂಡು ಅಲ್ಲಿಂದ ಮೆರವಣಿಗೆಯ ಮುಖಾಂತರ ಫ್ರೀಡಂ ಪಾರ್ಕ್‍ವರೆಗೆ ಸಾಗಿ, ನಂತರ ಅಲ್ಲಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಮೆರವಣಿಗೆ ಸಾಗಲಿದ್ದಾರೆ. ಮೈಸೂರು ಬ್ಯಾಂಕ್ ವೃತ್ತದಲ್ಲಿ ರೈತರು ಜಮಾವಣೆಗೊಂಡು ರಾಜ್ಯ, ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಬಂದ್ ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರ ಕೇಂದ್ರ ಉಪ-ವಿಭಾಗದ ವ್ಯಾಪ್ತಿಗೆ ಒಳಪಡುವ ಹಲಸೂರು ಗೇಟ್ ಸಂಚಾರ ಪೆÇಲೀಸ್ ಠಾಣಾ ಸರಹದ್ದಿಗೆ ಸೇರಿರುವ ಕೆ.ಜಿ.ರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ನೃಪತುಂಗ ರಸ್ತೆಯ ಕೆ.ಆರ್ ವೃತ್ತದಿಂದ ಪೆÇಲೀಸ್ ಕಾರ್ನರ್‍ವರೆಗೆ ಹಾಗೂ ಪೆÇಲೀಸ್ ಕಾರ್ನರ್ ವೃತ್ತದಿಂದ ಕೆ.ಆರ್.ವೃತ್ತದ ವರೆಗೆ ವಾಹನಗಳ ಸಂಚಾರಕ್ಕೆ ಮಾರ್ಪಾಡು ಮಾಡಲಾಗಿದೆ. ಈ ಸಂಚಾರ ಮಾರ್ಪಾಡುಗಳು ಸೆ.27ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಜಾರಿಯಲ್ಲಿರಲಿದೆ.
ದ್ವಿಮುಖ ಸಂಚಾರ ವ್ಯವಸ್ಥೆ:
ನೃಪತುಂಗ ರಸ್ತೆಯಲ್ಲಿ ಕೆ.ಆರ್.ವೃತ್ತದ ಕಡೆಯಿಂದ ಪೆÇಲೀಸ್ ಕಾರ್ನರ್ ವೃತ್ತದ ಕಡೆಗೆ ಪ್ರಸ್ತುತ ಜÁರಿಯಲ್ಲಿರುವ ಏಕ ಮುಖ ಸಂಚಾರವನ್ನು ದ್ವಿಮುಖ ಸಂಚಾರ ವ್ಯವಸ್ಥೆಯನ್ನಾಗಿ ಪರಿವರ್ತಿಸಲಾಗುತ್ತದೆ. ಅದರಂತೆ ಕೆ.ಆರ್ ವೃತ್ತದಿಂದ ಪೆÇಲೀಸ್ ಕಾರ್ನರ್ ವೃತ್ತದವರೆಗೆ ಮತ್ತು ಪೆÇಲೀಸ್ ಕಾರ್ನರ್ ವೃತ್ತದಿಂದ ಕೆ.ಆರ್ ವೃತ್ತದ ವರೆಗೆ ರಸ್ತೆಯ ಎರಡು ದಿಕ್ಕಿನಲ್ಲೂ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಂಚಾರ ಪೆÇಲೀಸರು ತಿಳಿಸಿದರು.