ಲೈಂಗಿಕ ದೌರ್ಜನ್ಯ ಆರೋಪ; ನಿರ್ದೇಶಕ ಅರೆಸ್ಟ್

ಸೋಮವಾರ, 21 ಆಗಸ್ಟ್ 2023 (19:48 IST)
ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮಾಲಿವುಡ್ ನಿರ್ದೇಶಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಿನಿಮಾದಲ್ಲಿ ನಟನೆಯ ಅವಕಾಶ ನೀಡುವುದಾಗಿ ಅಪ್ರಾಪ್ತೆಯನ್ನು ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಬಂದ ದೂರಿನ ಹಿನ್ನೆಲೆಯಲ್ಲಿ ಮಲಯಾಳಂ ನಿರ್ದೇಶಕ ಜಾಸಿಕ್‌ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆಗೆ ನಟನೆಯಲ್ಲಿ ಅವಕಾಶ ನೀಡುತ್ತೇನೆ ಎಂದು ವಿವಿಧ ಸ್ಥಳಕ್ಕೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಕೋಝಿಕ್ಕೋಡ್ ಕುರುವಂಗಡ್ ಮೂಲದ ಜಾಸಿಕ್ ಅಲಿಯನ್ನು ನಡಕ್ಕಾವುವಿನ ಮನೆಯೊಂದರಿಂದ ಬಂಧಿಸಲಾಗಿದೆ. ದೂರು ದಾಖಲಾದ ದಿನದಿಂದ ನಿರ್ದೇಶಕ ಜಾಸಿಕ್ ಪೊಲೀಸರಿಂದ ಪರಾರಿ ಆಗಲು ಯತ್ನಿಸಿದ್ದು, ನಾನಾ ಸ್ಥಳದಲ್ಲಿ ಅಡಗಿ ಕೂತಿದ್ದಾರೆ. ಪೊಲೀಸರು ವಿವಿಧ ಸ್ಥಳದಲ್ಲಿ ಹುಡುಕಾಟ ನಡೆಸಿ ಕೊನೆಗೂ ನಡಕ್ಕಾವುವಿನ ಮನೆಯೊಂದರಲ್ಲಿ ಬಂಧಿಸಿದ್ದಾರೆ. ಪೋಕ್ಸೋ ಆರೋಪದಡಿ ಆತನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ