ಮಳೆಗಾಗಿ ದೇವರ ಮೊರೆ ಹೋದ ಮೈತ್ರಿ ಸರ್ಕಾರ

ಗುರುವಾರ, 6 ಜೂನ್ 2019 (11:15 IST)
ಬೆಂಗಳೂರು : ಮಳೆಯ ಅಭಾವದಿಂದ ರಾಜ್ಯದೆಲ್ಲೆಡೆ ಬರಗಾಲ ತಾಂಡವವಾಡುತ್ತಿದ್ದು, ಈ ಹಿನ್ನಲೆಯಲ್ಲಿ ಇದೀಗ ರಾಜ್ಯ ಸರ್ಕಾರ ಮಳೆಗಾಗಿ ದೇವರ ಮೊರೆ ಹೋಗಿದೆ.



 



ಅದಕ್ಕಾಗಿ  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿರುವ ಮಳೆದೇವ ಋಷ್ಯಶೃಂಗ ದೇವಾಲಯದಲ್ಲಿ ಪರ್ಜನ್ಯ ಹೋಮವನ್ನು ಮೈತ್ರಿ ಸರ್ಕಾರ ಆಯೋಜಿಸಿದೆ. ಸಚಿವರಾದ ಡಿ.ಕೆ. ಶಿವಕುಮಾರ್ ಹಾಗೂ ಪಿ.ಟಿ. ಪರಮೇಶ್ವರ್ ನಾಯ್ಕ್ ಮುಂದಾಳತ್ವದಲ್ಲಿ ಹೋಮ ನಡೆಯುತ್ತಿದೆ.


ಇಂದು ಬೆಳಗ್ಗೆ 5.30ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಈಗಾಗಲೇ ಆರಂಭಿಸಲಾಗಿದೆ. 40 ಪುರೋಹಿತರಿಂದ ಪೂಜಾ ವಿಧಿವಿಧಾನ ಆರಂಭವಾಗಿದ್ದು, ಸತತವಾಗಿ ಹೋಮ ಹವನ ನಡೆಸಲಾಗುತ್ತಿದೆ. ಈ ವೇಳೆ ಪರ್ಜನ್ಯ ಹೋಮದ ಜೊತೆಗೆ ಪ್ರತಿಯೊಬ್ಬರು 10 ಸಾವಿರಕ್ಕೂ ಅಧಿಕ ಜಪ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ