ಬೆಂಗಳೂರು-ಪುಣೆ ನ್ಯಾಶನಲ್ ಹೈವೆ ರಸ್ತೆ ಪರಿಶೀಲನೆ ನಡೆಸ್ತಿರೋ ಅಲೋಕ್ ಕುಮಾರ್

ಬುಧವಾರ, 2 ಆಗಸ್ಟ್ 2023 (15:22 IST)
ಹೈವೇ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಬೆಂಗಳೂರು-ಪುಣೆ ನ್ಯಾಶನಲ್ ಹೈವೆ ರಸ್ತೆಯಲ್ಲಿ ಅಲೋಕ್ ಕುಮಾರ್ ಪರಿಶೀಲನೆ ನಡೆಸಿದ್ರು.ಸಂಚಾರ ಮತ್ತು ಸುರಕ್ಷತಾ ಪ್ರಾಧಿಕಾರ ಎಡಿಜಿಪಿ ಅಲೋಕ್ ಕುಮಾರ್ ಇತ್ತೀಚೆಗೆ ರಾಜ್ಯದ ಹೈವೇ ರಸ್ತೆಗಳಲ್ಲಿ ಹೆಚ್ಚಾಗಿರೋ ಅಪಘಾತಗಳ ಸಂಖ್ಯೆ,ಮೈಸೂರು ದಶಪಥ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತ ವಿಚಾರ ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗಿತ್ತು.ಇತ್ತೀಚೆಗೆ ಮೈಸೂರು ದಶಪಪತ ರಸ್ತೆ ಪರಿಶೀಲನೆ ಮಾಡಿ ಕ್ರಮವನ್ನ ಅಲೋಕ್ ಕುಮಾರ್ ಕೈಗೊಂಡರು.ಈಗ ಬೇರೆ ಬೇರೆ ಹೈವೇ ರಸ್ತೆಗಳ ಪರಿಶೀಲನೆ ನಡೆಸಲಾಗ್ತಿದೆ.
 
ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ  ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ನಡೆಸಿದ್ದು,ಅಲೋಕ್ ಕುಮಾರ್ ಗೆ  ಐಜಿಪಿ ರವಿಕಾಂತೇಗೌಡ, ಎಸ್ ಪಿ ಮಲ್ಲಿಕಾರ್ಜುನ್ ಬಾಲ್ದಂಡಿ ಮಾಹಿತಿ ನೀಡಿದ್ದಾರೆ.ಫ್ಲೈ ಓವರ್ ಗಳ, ಹೈವೇ ಪರಿಶೀಲನೆ ನಡೆಸಿ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಪಡೆಯುತ್ತದ್ದಾರೆ.
 
ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರದಲ್ಲಿ ಹೆಚ್ಚು ಅಪಘಾತ ಆಗ್ತಿವೆ.ಕಳೆದ ತಿಂಗಳಲ್ಲಿ 49 ಅಪಘಾತಗಳು ಸಂಭವಿಸಿವೆ.ರಾಜ್ಯದಲ್ಲಿ ಎರಡನೇ ಸ್ಥಾನ ಬಂದಿದೆ.ಹೀಗಾಗಿ ಇಷ್ಟು ಅಪಘಾತಕ್ಕೆ ಏನು ಕಾರಣ ಅಂತಾ ಪರಿಶೀಲನೆ ಮಾಡೋಕೆ ಬಂದೆ.ನೆಲಮಂಗಲ - ತುಮಕೂರು ಮಧ್ಯೆ ಸಾಕಷ್ಟು ಅಪಘಾತಗಳು ಆಗ್ತಿವೆ.ಹೈ ರೆಸ್ಯೂಲೇಷನ್ ಕ್ಯಾಮೆರಾಗಳು ಅಳವಡಿಸಲಾಗಿದೆ.ಅವು ಹೇಗೆ ಕಾರ್ಯ ನಿರ್ವಹಿಸಲಾಗುತ್ತೆ ಅಂತಾ ಪರಿಶೀಲನೆ ನಡೆಸ್ತೀನಿ.ಜೊತೆಗೆ ಒಂದಷ್ಟು ಸಮಸ್ಯೆಗಳಿವೆ.ಅದರ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದೀನಿ.ಅಲ್ಲಲ್ಲಿ ರ್ಯಾಂಪ್ ಗಳನ್ನ ಅಳವಡಿಸೋಕೆ ಸೂಚನೆ ನೀಡಿದ್ದೇನೆ.ಫ್ಲೈ ಓವರ್ ಅಕ್ಕ-ಪಕ್ಕ ಒಂದಷ್ಟು ಸಮಸ್ಯೆಗಳಿವೆ.ಅದರ ಬಗ್ಗೆ ಮಾಹಿತಿ ಪಡೆದಿದ್ದೇನೆ‌‌.ಟೋಲ್ ಗಳ ಬಳಿ ಏನು ಸಮಸ್ಯೆ ಆಗ್ತಿದೆ ಅದ್ರ ಬಗ್ಗೆ ಮಾಹಿತಿ ಪಡೀತೀನಿ ಅಂತಾ ಅಲೋಕ್ ಕುಮಾರ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ