ಯಾವುದೇ ಅಹಿತಕರ ಘಟನೆ ಆಗದಂತೆ ಮುನ್ನೆಚ್ಚರಿಕೆ : ಅಲೋಕ್ ಕುಮಾರ್
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜ.28 ರಂದು ಅಮಿತ್ ಶಾ ನಾಲ್ಕು ಕಡೆ ಬರುತ್ತಿದ್ದಾರೆ. ಗುರುವಾರ ರಾತ್ರಿ ಹುಬ್ಬಳ್ಳಿಯಲ್ಲಿ ಅವರದ್ದು ವಾಸ್ತವ್ಯ ಇದೆ. ನಾಳೆ ಕೆಎಲ್ಇ ಸಂಸ್ಥೆಯ ಭೂಮರಡ್ಡಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
ಧಾರವಾಡದಲ್ಲಿ ಒಂದು ಕಾರ್ಯಕ್ರಮ, ಇದಾದ ಬಳಿಕ ಕುಂದಗೋಳದಲ್ಲಿ ರೋಡ್ ಶೋದಲ್ಲಿ ಭಾಗಿಯಾಗುತ್ತಾರೆ. ನಂತರ ಬೆಳಗಾವಿ ಜಿಲ್ಲೆಯ ಎಂಕೆ ಹುಬ್ಬಳ್ಳಿಗೆ ಬರುತ್ತಾರೆ. ಅಲ್ಲಿಂದ ಬೆಳಗಾವಿಗೆ ಆಗಮಿಸಿ ಪಾರ್ಟಿ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ. 28 ರಂದು ರಾತ್ರಿ 10 ಗಂಟೆಗೆ ವಾಪಾಸ್ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ ಎಂದರು.