ಸಂಪುಟದಿಂದ ಅಂಬರೀಶ್ ಕೈಬಿಡುವ ಕ್ರಮಕ್ಕೆ ತೀವ್ರ ಖಂಡನೆ

ಶನಿವಾರ, 18 ಜೂನ್ 2016 (16:06 IST)
ಯಾವುದೇ ಹಗರಣದಲ್ಲಿ ಭಾಗಿಯಾಗದ ಸಚಿವ ಅಂಬರೀಶ್‌ರನ್ನು ಸಂಪುಟದಿಂದ ಕೈಬಿಡುವುದು ಸರಿಯಲ್ಲ. ಒಂದು ವೇಳೆ, ಅವರನ್ನು ಸಂಪುಟದಿಂದ ಕೈಬಿಟ್ಟಲ್ಲಿ ಮಂಡ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅವಸಾನದ ಅಂಚಿಗೆ ತಲುಪಲಿದೆ ಎಂದು ಸಚಿವ ಅಂಬರೀಶ್ ಆಪ್ತ ಲಿಂಗರಾಜು ಎಚ್ಚರಿಸಿದ್ದಾರೆ.
 
ಸಚಿವರಾಗಿ ಅಂಬರೀಶ್‌‍ರನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿ ಅವರ ಬೆಂಬಲಿಗರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಭಾರಿ ಪ್ರತಿಭಟನೆ ಆರಂಭಿಸಿದ್ದಾರೆ.
 
ಅಂಬರೀಶ್‌ರಾಗಲಿ ಅಥವಾ ಅವರ ಮಕ್ಕಳಾಗಲಿ ಮರಳು ಗಣಿಗಾರಿಕೆಯಲ್ಲಾಗಲಿ ಅಥವಾ ಭ್ರಷ್ಟಾಚಾರವಾಗಲಿ ಎಸಗಿಲ್ಲ.. ಕಳಂಕರಹಿತ ವ್ಯಕ್ತಿಯನ್ನು ಸಚಿವ ಸ್ಥಾನದಿಂದ ಕೈಬಿಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶೋಭೆ ತರುವುದಿಲ್ಲ ಎಂದು ಗುಡುಗಿದ್ದಾರೆ.
 
ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರವಾಗಿರಬೇಕು ಎಂದರೆ ಸಚಿವ ಅಂಬರೀಶ್‌ರನ್ನು ಮುಂದುವರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಂಬರೀಶ್ ಬೆಂಬಲಿಗರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ