ಈ ಕಾಡಿನ ನಡುವೆ ಸೇರಿದ್ರೆ ಗೋವಿಂದಾ… ಗೋವಿಂದಾ… ಹೀಗೂ ಉಂಟೇ?

ಬುಧವಾರ, 4 ಡಿಸೆಂಬರ್ 2019 (19:27 IST)
ದಟ್ಟ ಕಾಡಿನಲ್ಲಿ ಆ ಜನರು ಸೇರಿದಾಗ ಹೇಳುವ ಮಾತೇ ಗೋವಿಂದಾ.. ಗೋವಿಂದಾ…

ಮಂಡ್ಯದ ನಾಗಮಂಗಲದ ದೇವಲಪುರ ಸಮೀಪವಿರುವ ನಾಗನಕೆರೆ ಬಳಿ "ಗಿಡದ ಜಾತ್ರೆ" ಎಂದು ಪ್ರಸಿದ್ಧಿ ಪಡೆದಿದೆ.
ಗಿಡದ ಜಾತ್ರೆಯೂ ಒಂದೇ ದಿನವಾದರೂ ಸಾವಿರಾರು ಭಕ್ತರೂ ಕಾಡಿನ ನಡುವೆ ಜಮಾವಣೆಯಾಗುತ್ತಾರೆ.

ಈ ಜಾತ್ರೆಯ ವಿಶೇಷ ಎಂದರೆ ತಿರುಪತಿ ವೆಂಕಟೇಶ್ವರನ ಸನ್ನಿಧಿಗೆ ಹೋಗದವರು ಈ ಜಾತ್ರೆಗೆ ಬಂದು ಹರಕೆ ತೀರಿಸುತ್ತಾರೆ.
ಜಾತ್ರೆಯಲ್ಲಿ ಶ್ರೀನಿವಾಸನ ಭಕ್ತರು ದಾಸಯ್ಯರ ಪಾರುಸೆ ಗುಂಪು ಗುಂಪು ಜಿಲ್ಲೆಯ ಬೇರೆ ಬೇರೆ ಊರುಗಳಿಂದ ಆಗಮಿಸುತ್ತಾರೆ.

ಗಿಡದಲ್ಲಿ ಸೇರುತ್ತಾರೆ. ಗಿಡದಲ್ಲಿ "ಗೋವಿಂದ ಗೋವಿಂದ ಗೋವಿಂದ" ಅಂತ ಹೇಳೋ ಭಕ್ತಿಯ ಕೂಗು ಮುಗಿಲು ಮುಟ್ಟವಂತೆ ಕೇಳಿಬಂದಿತು.  

ದಾಸಯ್ಯರ ಪರುಸೆ ನೋಡುವುದೇ ವಿಶೇಷ. ಎರಡನೇ ತಿರುಪತಿಯೆಂದು ಖ್ಯಾತಿ ಇದಕ್ಕಿದೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ