ಎಎಪಿ ವಿರುದ್ಧ ಅಮಿತ್ ಶಾ ಪ್ರತಿತಂತ್ರ
ನವದೆಹಲಿ ಮುನ್ಸಿಪಲ್ ಚುನಾವಣೆಯ ಹಿನ್ನೆಲೆ ಬಿಜೆಪಿ ಮತ್ತು ಆಪ್ ನಡುವೆ ರಾಜಕೀಯ ಕೆಸರೆರಚಾಟ ಶುರುವಾಗಿದೆ. ತುಘಲಕಾಬಾದ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ ನಗರದ ನಾಲ್ಕನೇ ತ್ಯಾಜ್ಯದಿಂದ ಇಂಧನ ಯೋಜನೆಯು ಮತ್ತೊಂದು ಮಾತಿನ ಸಮರಕ್ಕೆ ನಾಂದಿ ಹಾಡಿದೆ. 2025 ರ ವೇಳೆಗೆ ಕಸ ಮುಕ್ತ ದೆಹಲಿಯ ಭರವಸೆಯನ್ನು ನೀಡಿದ ಸಚಿವ ಅಮಿತ್ ಶಾ, ದೆಹಲಿಯನ್ನು ಎಎಪಿ ನಿರ್ಭರ್ ಮತ್ತು ಆತ್ಮನಿರ್ಭರ್ ಸ್ವಾವಲಂಬಿ ಎಂದು ಆಯ್ಕೆ ಮಾಡಿಕೊಳ್ಳಲು ಉತ್ತೇಜಿಸಿದ್ದಾರೆ. ನಂತರ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ಜೀ ನಡೆದುಕೊಂಡ ರೀತಿ, ಪ್ರಜಾಪ್ರಭುತ್ವದ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸುವ ಸಮಯ ಬಂದಿದೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ ಅವರು, ಇಂದು ದೆಹಲಿಯನ್ನು ಸ್ವಚ್ಛಗೊಳಿಸಲು ಒಂದು ದೊಡ್ಡ ಹೆಜ್ಜೆ ಇಡಲಾಗಿದೆ. 2025ರ ಮೊದಲು ದೆಹಲಿಯ ಎಲ್ಲಾ ದಿನನಿತ್ಯದ ಕಸವನ್ನು ವಿಲೇವಾರಿ ಮಾಡಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೇವೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ಭವಿಷ್ಯದಲ್ಲಿ, ಈ ಬೃಹತ್ ಕಸದ ತೊಟ್ಟಿಗಳು, ಕಸದ ಪರ್ವತಗಳು ಇನ್ನು ಮುಂದೆ ಕಾಣಿಸುವುದಿಲ್ಲ. ನಮ್ಮ ದೆಹಲಿ ಸುಂದರವಾಗಿರುತ್ತದೆ ಎಂದರು.