ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಶುರುವಾಗುತ್ತಲೆ ಕೇಸರಿ ಪಡೆಯಲ್ಲಿ ಸಂಚಲನ ಶುರುವಾಗ್ತಿದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರಬೇಕಂತಾ ಪ್ರಧಾನಿ ಮೋದಿ, ಅಮಿತ್ ಶಾ ಮತ್ತೆ ರಾಜ್ಯ ಪ್ರವಾಸಕ್ಕೆ ಸಿದ್ದತೆ ನಡೆಸಿದ್ದಾರೆ. ನಿನ್ನೆ ತಡರಾತ್ರಿಯವರೆಗೂ ರಾಜ್ಯ ನಾಯಕರು ವಿಸ್ತಾರಕರು ಸೇರಿದಂತೆ ಪ್ರಮುಖ ನಾಯಕರ ಜೊತೆ ಅಮಿತ್ ಶಾ ಸಭೆ ಮೇಲೆ ಸಭೆ ಮಾಡಿ ಸದ್ಯ ರಾಜ್ಯದ ಎಲೆಕ್ಷನ್ ಟ್ರೆಂಡ್ ಬಗ್ಗೆ ಮಾಹಿತಿ ಪಡೆದು ರಾಜ್ಯ ನಾಯಕರಿಗೆ ಟಾಸ್ಕ್ ಗಳನ್ನ ನೀಡಿದ್ದಾರೆ. ಜೊತೆಗೆ ಕೊನೆ ಸಮಯದಲ್ಲಿ ಅಮಿತ್ ಶಾ ಸಿಎಂ ಬೊಮ್ಮಾಯಿ ಸಭೆ ಸಾಕಷ್ಟು ಕುತೂಹಲ ಮೂಡಿಸಿದೆ.
ರಾಜ್ಯ ಚುನಾವಣಾ ಅಖಾಡ ದಿನೇದಿನೇ ಹೊಸ ಹೊಸ ತಿರುವುಗಳನ್ನ ಪಡೆಯುತ್ತಿದೆ. ಕಾಂಗ್ರೆಸ್ ಜೆಡಿಎಸ್ ಗೆ ಟಕ್ಕರ್ ನೀಡಿ ಮತ್ತೆ ರಾಜ್ಯದಲ್ಲಿ ಅಧಿಕಾಕರಕ್ಕೆ ಬರೋದಕ್ಕೆ ಕೇಸರಿ ಪಡೆ ಸಿದ್ದವಾಗಿ ನಿಂತಿದೆ.. ನಿನ್ನೆ ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ಚುನಾವಣಾ ಚಾಣಾಕ್ಷ ಅಮಿತ್ ಶಾ ಬೆಳಗ್ಗಿನ ಜಾವ 3 ಗಂಟೆಯವರೆಗೂ ಸಭೆಗಳ ಮೇಲೆ ಸಭೆ ಮಾಡಿದ್ದಾರೆ. ರಾಜ್ಯದ 54 ಜನರ ಪ್ರಮುಖರು ಹಾಗೂ ಬೇರೆ ಬೇರೆ ರಾಜ್ಯದಿಂದ ಆಗಮಿಸಿದ್ದ ವಿಸ್ತಾರಕರ ಜೊತೆಯು ಅಮಿತ್ ಶಾ ಮಹತ್ವದ ಸಭೆ ನಡೆಸಿದ್ದಾರೆ.
ಇನ್ನೂ ಅಮಿತ್ ಶಾ ಸಭೆಯ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ , ಎಲ್ಲೆಲ್ಲಿ ಪ್ರಚಾರ ಮಾಡಬೇಕು, ಯಾವ ಕ್ಷೇತ್ರಗಳಿಗೆ ಹೆಚ್ಚಿನ ಗಮನ ಕೊಡಬೇಕು ಅನ್ನೋದ್ರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ನಾಳೆಯಿಂದ ಪ್ರಚಾರಕ್ಕೆ ತೆರಳುತ್ತೇನೆಯಲಹಂಕದಿಂದ ರೋಡ್ ಶೋ ಆರಂಭ ಮಾಡಿ,ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ,ಅರಸಿಕೇರೆ. ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಹೂಡಿ ನಂತರ ಬೆಳಗಾವಿ ಭಾಗ, ಗುಲಬರ್ಗಾ ಭಾಗ ಹಾಗೂ ಮೈಸೂರು ಭಾಗಳಲ್ಲೂ ಚುನಾವಣಾ ಯಾತ್ರೆ ಮಾಡುತ್ತೇನೆ. ಪ್ರಚಾರ ನಡೆಸುವ ಎಲ್ಲಾ ಕ್ಷೇತ್ರಗಳಲ್ಲೂ ರೋಡ್ ಶೋ ಮಾಡ್ತಿನಿ ಅಂತ ಸಿಎಂ ಮಾಹಿತಿ ನೀಡಿದ್ರು.