ಕರ್ನಾಟಕದಲ್ಲಿ ಅಮಿತ್ ಶಾ ಕಾರ್ಯಕ್ರಮಗಳು ರದ್ದು?
ರಾಯಚೂರು ಜಿಲ್ಲೆಯ ಎರಡು ಕಡೆ ಮತಬೇಟೆಗೆ ಸಿದ್ಧತೆಗಳು ನಡೆದಿದ್ದು, ಗುರುವಾರ ರಾತ್ರಿ ಏಕಾಏಕಿ ಕಾರ್ಯಕ್ರಮಗಳು ರದ್ದುಗೊಂಡಿದೆ. ರಾಯಚೂರು ಗ್ರಾಮೀಣ ಕ್ಷೇತ್ರ ಹಾಗೂ ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಿಗದಿಯಾಗಿತ್ತು. ಇದೀಗ ಅಮಿತ್ ಶಾ ಬದಲಾಗಿ ರಾಜ್ಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಜಿಲ್ಲೆಯ ಯಾಪಲದಿನ್ನಿ ಹಾಗೂ ಮಸ್ಕಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಲಿದ್ದಾರೆ. ರಾಜ್ಯ ಸಹ ಉಸ್ತುವಾರಿ ಡಿಕೆ ಅರುಣಾ ಹಾಗೂ ತೆಲುಗು ನಟ ಪವನ್ ಕಲ್ಯಾಣ್ ಭಾಗಿಯಾಗುವ ಸಾಧ್ಯತೆಗಳಿವೆ.