ಬಾಗಲಕೋಟೆ : ಬಿಜೆಪಿ ಸರ್ಕಾರ ಮಾಡಿದ ಕೆಲಸಗಳಲ್ಲಿ ಕಾಂಗ್ರೆಸ್ ಕೇವಲ 10 ಪರ್ಸೆಂಟ್ ಮಾಡಿದ್ದರೆ, ವೋಟ್ ಕೇಳುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಎಂ.ವಿ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕಳೆದ 4 ವರ್ಷಗಳಲ್ಲಿ ಅನೇಕ ಕೆಲಸಗಳನ್ನ ಮಾಡಿದೆ. ನೇಕಾರರಿಗೆ 2 ರಿಂದ 5 ಲಕ್ಷವರೆಗೆ ಶೇ.3 ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಿದೆ,
4 ಲಕ್ಷ ಕುಟುಂಬಗಳಿಗೆ ಮನೆ ನೀಡಿದೆ, 46 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಪರಿಹಾರ ನೀಡಿದೆ. ನಾವು ಮಾಡಿದ ಕೆಲಸಗಳಲ್ಲಿ ಕಾಂಗ್ರೆಸ್ 10 ಪರ್ಸೆಂಟ್ ಮಾಡಿದ್ದರೂ ವೋಟ್ ಕೇಳಲು ಬರುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ಗುದ್ದಾಡುತ್ತಿದ್ದಾರೆ. ಆದ್ರೆ ಮುಖ್ಯಮಂತ್ರಿ ಆಗಲು ನಿಮ್ಮ ನಂಬರೇ ಬಂದಿಲ್ಲ, ಯಾಕೆ ಕಿತ್ತಾಡ್ತೀರಾ? ಎಂದು ಶಾ ಕುಟುಕಿದ್ದಾರೆ.