ಅಮಿತ್ ಶಾ ಭೇಟಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಮೊಕ್ಕಾಂ!

ಶುಕ್ರವಾರ, 30 ಮಾರ್ಚ್ 2018 (09:06 IST)
ಮೈಸೂರು: ಸಿಎಂ ಸಿದ್ದರಾಮಯ್ಯನವರ ತವರೂರು ಎಂಬ ಕಾರಣಕ್ಕೆ ಮೈಸೂರು ಭಾಗ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಎರಡೂ ಪಕ್ಷಗಳು ಈ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಳೆ ಮೈಸೂರು ಭಾಗದಲ್ಲಿ ಸಂಚಾರ ನಡೆಸಿ, ಮತದಾರರ ಓಲೈಕೆಗೆ ಮುಂದಾಗುವುದರ ಜತೆಗೆ ಕಾಂಗ್ರೆಸ್ ಸೋಲಿಸಲು ತಂತ್ರ ಹೆಣೆಯುತ್ತಿದ್ದಾರೆ. ಈಗಾಗಲೇ ತಮ್ಮ ನಂಬಿಕಸ್ಥರ ತಂಡವನ್ನೇ ಇಲ್ಲಿ ಬಿಟ್ಟಿದ್ದಾರೆ.

ಶಾ, ಭೇಟಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೂಡಾ ತಮ್ಮ ತವರು ಕ್ಷೇತ್ರದ ಬಗ್ಗೆ ಹಚ್ಚಿನ ಮುತುವರ್ಜಿ ವಹಿಸಲು ಖುದ್ದು ನಾಲ್ಕು ದಿನಗಳ ಪ್ರವಾಸ ಮಾಡಲಿದ್ದಾರೆ. ಇಲ್ಲಿಯೇ ಬೀಡುಬಿಟ್ಟು ತಾವು ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ಕೊಡಲು ಉದ್ದೇಶಿಸಿದ್ದಾರೆ. ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದರಿಂದ ಮತ್ತೆ ಗೆಲ್ಲುವ ವಿಶ್ವಾಸವೇನೋ ಸಿದ್ದರಾಮಯ್ಯರಿಗಿದೆ.

ಅದರೆ ತಮ್ಮ ಹಳೆಯ ಸ್ನೇಹಿತ, ಬಿಜೆಪಿ ಸೇರಿಕೊಂಡಿರುವ ಶ್ರೀನಿವಾಸ ಪ್ರಸಾದ್ ಸೇರಿದಂತೆ ಹಲವರು ಸಿಎಂ ಸೋಲಿಗೆ ಟೊಂಕ ಕಟ್ಟಿ ನಿಂತಿರುವುದರಿಂದ ತಮ್ಮ ಕ್ಷೇತ್ರವನ್ನು ಹಗುರವಾಗಿ ಕಾಣುವಂತಿಲ್ಲ. ಹಾಗಾಗಿ ಎರಡೂ ಪಕ್ಷಗಳಿಂದ ಇಲ್ಲಿ ಜಿದ್ದಾ ಜಿದ್ದಿನ ಫೈಟ್ ನಿರೀಕ್ಷಿಸಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ