ಮೊದಲ ದಿನವೇ ನೀತಿ ಸಂಹಿತೆ ಉಲ್ಲಂಘಿಸಿದ ಸಿದ್ದರಾಮಯ್ಯ?

ಗುರುವಾರ, 29 ಮಾರ್ಚ್ 2018 (14:15 IST)
ಮೈಸೂರಿನ ರಮನಹಳ್ಳಿ ಮುಖ್ಯ ದ್ವಾರದಲ್ಲಿ ಸ್ವಾಗತಿಸಲು ಬಂದ ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ ಹಣ ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ತಮ್ಮನ್ನು ಸ್ವಾಗತಿಸಲು ಬಂದ ಇಬ್ಬರು ಮಹಿಳೆಯರಿಗೆ ಸಿಎಂ,  ತಲಾ 2 ಸಾವಿರ ಹಣ ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನಲಾಗುತ್ತಿದೆ.
 
ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದ ಸಿಎಂ ಸಿದ್ದರಾಮಯ್ಯ. ಚಾಮುಂಡೇಶ್ಚರಿ ಕ್ಷೇತ್ರದ ರಮನಹಳ್ಳಿಯಿಂದ ಪ್ರಚಾರ ಆರಂಭಿಸಿದರು. ರಾಮನಹಳ್ಳಿ ಗ್ರಾಮಸ್ಥರು. ಪಟಾಕಿ ಸಿಡಿಸಿ, ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದರು. ಸಿಎಂ ಸಿದ್ದರಾಮಯ್ಯ ಗೆ ಪುತ್ರ ಯತೀಂದ್ರ ಸಾಥ್ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮತದಾರರಲ್ಲಿ ಕೋರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ