85 ವರ್ಷದ ವೃದ್ಧೆಯ ಮೇಲೆ 18 ವರ್ಷದ ಯುವಕನಿಂದ ಅತ್ಯಾಚಾರ

ಶನಿವಾರ, 15 ಡಿಸೆಂಬರ್ 2018 (07:32 IST)
ಲಕ್ನೋ : ಕುಡಿದ ಮತ್ತಿನಲ್ಲಿ 18 ವರ್ಷದ ಯುವಕನೊಬ್ಬ 85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮುಜಪ್ಫರ್ ನಗರದಲ್ಲಿ ನಡೆದಿದೆ.


ಮನೆಯವರೆಲ್ಲಾ ಹೊರಗೆ ಹೋಗಿದ್ದ ವೇಳೆ ಅಜ್ಜಿ ಒಬ್ಬಳೆ  ಮನೆಯಲ್ಲಿ ಇದ್ದ ವೇಳೆ ಕುಡಿದು ಮನೆಗೆ ನುಗ್ಗಿದ 18 ವರ್ಷದ ಯುವಕನೊಬ್ಬ ಅಜ್ಜಿಯ ಮೇಲೆ ಇಂತಹ ಹೀನ ಕೃತ್ಯ ಎಸಗಿ ಅಲ್ಲಿಂದ ಪರಾರಿಯಾಗಿದ್ದಾನೆ. ಮನೆಯವರು ವಾಪಸ್ ಬಂದಾಗ ಅಜ್ಜಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದು, ನಂತರ  ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಈ ದೂರಿನ ಆಧಾರದ ಮೇಲೆ ಆರೋಪಿ ಯುವಕನ ಮೇಲೆ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ  ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ಎಫ್‍ಐಆರ್ ಕೂಡ ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ