ಐವರ ವಿರುದ್ಧ FIR ದಾಖಲು

ಬುಧವಾರ, 11 ಜನವರಿ 2023 (20:52 IST)
ಬೆಂಗಳೂರಿನ ಹೆಬ್ಬಾಳ ಸಮೀಪ ನಿನ್ನೆ ಅಪಘಾತ ಸಂಭವಿಸಿ ತಾಯಿ-ಮಗು ಮೃತಪಟ್ಟಿದ್ದರು. ನಂತರ ಮೆಟ್ರೋ ಘಟನೆಯ ಸಂಭಾವ್ಯ ಕಾರಣಗಳು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಧಿಕೃತ ಹೇಳಿಕೆ ಹೊರಡಿಸಿತು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ಘಟನೆ ನಡೆದು ನಾಲ್ಕು ಗಂಟೆಗಳ ನಂತರ ಸ್ಥಳಕ್ಕೆ ಭೇಟಿ ನೀಡಿದರು. ಸಂಬಂಧಿಸಿದ ಗುತ್ತಿಗೆದಾರರು ಮತ್ತು ಎಂಜಿನಿಯರ್​ಗಳಿಗೆ ನೊಟೀಸ್ ಜಾರಿ ಮಾಡಲಾಗುವುದು. ಆಂತರಿಕ ತಾಂತ್ರಿಕ ಸಮಿತಿಯಿಂದ ಈ ಸಂಬಂಧ ತನಿಖೆ ನಡೆಸಲಾಗುವುದು ಎಂದ್ರು...ಇನ್ನು ಈಗಾಗಲೇ ಗೋವಿಂದಪುರ ಠಾಣೆಯಲ್ಲಿ ಐವರ ವಿರುದ್ಧ ಕೇಸ್‌ ದಾಖಲಾಗಿದೆ..ಮೃತ ತೇಜಸ್ವಿನಿ ಪತಿ ಲೋಹಿತ್ ದೂರಿನ ಆಧಾರದ ಮೇಲೆ  A 1 ಸೈಟ್ ಎಂಜಿನಿಯರ್, A 2 ಮೆಟ್ರೋ ಗುತ್ತಿಗೆದಾರರು,  A 3 ಸೈಟ್ ಇನ್​​​​ಚಾರ್ಜ್ ಅಧಿಕಾರಿಗಳು, A 4 BMRCL ಅಧಿಕಾರಿಗಳು, A 5 ಇತರರ ಮೇಲೆ FIR ದಾಖಲು ಮಾಡಲಾಗಿದೆ.. IPC ಸೆಕ್ಷನ್ 336, 337, 304A, 427, ಸೆಕ್ಷನ್ 34 ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ