ಪ್ರಾಣದ ಹಂಗು ತೊರೆದು ದೇಶ ರಕ್ಷಣೆ ಮಾಡುವ ವೀರಯೋಧರಿಗೆ ವಿನೂತನವಾಗಿ ನಮನ ಸಲ್ಲಿಸಲಾಯಿತು.
ವೀರಯೋಧರು ನಮಗೆ ಆದರ್ಶರಾಗಿರಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಚಿ.ನಾ. ರಾಮು ಹೇಳಿದ್ರು. ಬೆಂಗಳೂರಿನ ಮಹೇಶ್ ಲಲಿತಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಮಲಾ ನರಗದ ಪ್ರಭಾತ್ ರಂಗಮಂದಿರದಲ್ಲಿ ಏರ್ಪಡಿಸಿದ್ದ `ಹುತಾತ್ಮ ಯೋಧರ ಸ್ಮರಣೆಗಾಗಿ ಸಂಗೀತ ನೃತ್ಯ ನಮನ’ ಹಾಗೂ ನಾಡಿಗೆ ಕೊಡುಗೆ ನೀಡಿದ ಮಹನೀಯರಿಗೆ `ಕಾಯಕ ಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಸದ್ಭಾವನ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
``ಹಗಲು-ರಾತ್ರಿ ಎನ್ನದೇ ನಮ್ಮ ದೇಶ ಕಾಯುವ ವೀರ ಯೋಧರ ಸೇವೆಯ ಸ್ಮರಣೆಗಾಗಿ ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆದು ಮಕ್ಕಳಲ್ಲಿ ಸ್ಫೂರ್ತಿ ತುಂಬುವಂತೆ ಮಾಡಬೇಕು. ಮಕ್ಕಳ ಸಂಗೀತ- ನೃತ್ಯದ ಮೂಲಕ ದೇಶಭಕ್ತಿ ತರುವಂತಹ ಪ್ರಯತ್ನ ಯಶಸ್ವಿಯಾಗಲಿ’’ ಎಂದು ಆಶಿಸಿದರು.
ಕುಪ್ಪೂರು ಷ|| ಬ್ರ|| ಡಾ. ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಹುತಾತ್ಮರಾದ ಯೋಧರ ಸ್ಮರಣೆಗಾಗಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ವಿಶೇಷ ಹಾಗೂ ವಿಭಿನ್ನ ಎಂದರು.