ಇಡೀ ಮಹಿಳಾ ಕುಲಕ್ಕೆ ಅಪಮಾನ : ಪ್ರಹ್ಲಾದ್ ಜೋಶಿ

ಶನಿವಾರ, 13 ಆಗಸ್ಟ್ 2022 (11:12 IST)
ಹುಬ್ಬಳ್ಳಿ : ಪ್ರಿಯಾಂಕ್ ಖರ್ಗೆ ಅವರು ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ. ಯಾವ ಮಹಿಳೆಯೂ ಈ ಹೇಳಿಕೆಯನ್ನ ಸಹಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
 
ಪ್ರಿಯಾಂಕ್ ಖರ್ಗೆಯ ಲಂಚ, ಮಂಚ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಅವರ ಕೀಳು ಅಭಿರುಚಿ ತೋರಿಸುತ್ತಿದೆ. ಮಹಿಳಾ ಸಮುದಾಯಕ್ಕೆ ಅವರು ಈ ಕೂಡಲೇ ಕ್ಷಮೆ ಕೇಳಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಭ್ರಷ್ಟಾಚಾರವಾಗಿದೆ.

ಮಲ್ಲಿಕಾರ್ಜುನ್ ಖರ್ಗೆ ಕೇಂದ್ರದ ಸಚಿವ ಇದ್ದಾಗ ಅನೇಕ ವಿಷಯಗಳಲ್ಲಿ ಭ್ರಷ್ಟಾಚಾರವಾಗಿದೆ. ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇದ್ದಿದ್ರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದು ಎಂದು ವಾಗ್ದಾಳಿ ನಡೆಸಿದರು.

ಹೊಸ ಸಂಸತ್ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಮುಂದಿನ ನೂರು ವರ್ಷಕ್ಕೆ ಸಂಸತ್ ಯಾವ ರೀತಿ ಇರಬೇಕು ಎಂಬ ಚಿಂತನೆಯಲ್ಲಿ ಸಂಸತ್ ನಿರ್ಮಾಣ ಮಾಡಲಾಗಿದೆ. ಜಗತ್ತಿನಲ್ಲೇ ಈ ರೀತಿಯ ಕಟ್ಟಡ ಎಲ್ಲಿಯೂ ನಿರ್ಮಾಣ ಮಾಡಿಲ್ಲ. ಜಗತ್ತಿಗೆ ಒಂದು ಉತ್ತಮ ನಿದರ್ಶನ ಈ ಸಂಸತ್ ಆಗಿದೆ ಎಂದರು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ