ವೃದ್ಧನ ಮೇಲೆ ನಾಲ್ವರು ಮಹಿಳೆಯರಿಂದ ಹಲ್ಲೆ..!
ಬಸ್‌ನಲ್ಲಿ ಆಸನಕ್ಕಾಗಿ ವಯೋವೃದ್ಧನ ಮೇಲೆ ಮಹಿಳೆಯರು ಮನಸೋ ಇಚ್ಛೆ ಥಳಿಸಿರುವ ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿಯಿಂದ ಸೇಡಂ ಗೆ ಹೊರಟ್ಟಿದ್ದ ಬಸ್‌ನಲ್ಲಿ ಕುಳಿತಿದ್ದ ವೃದ್ಧ. ಈ ವೇಳೆ ಬಸ್ ಹತ್ತಿದ್ದ ನಾಲ್ವರು ಮಹಿಳೆಯರು. ಸೀಟು ಬಿಡುವಂತೆ ಹೇಳಿದ್ದಾರೆ. ಆದರೆ ಮುಂದಿನ ಸೀಟು ಖಾಲಿ ಇವೆ ಅಲ್ಲಿ ಕುಳಿತುಕೊಳ್ಳಿ ಎಂದಿರುವ ವೃದ್ಧ. ಅಷ್ಟಕ್ಕೆ ನಾಲ್ವರು ಮಹಿಳೆಯರು ವಯೋವೃದ್ಧನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.