ಅನಂತ ಕುಮಾರ್ ಹೆಗಡೆ ಸಂಸದ ಅಲ್ಲ , ಗ್ರಾ.ಪಂ. ಸದಸ್ಯ ಆಗಲು ಕೂಡ ಯೋಗ್ಯ ಅಲ್ಲ- ಎಂ.ಬಿ. ಪಾಟೀಲ್

ಸೋಮವಾರ, 28 ಜನವರಿ 2019 (11:34 IST)
ಮಂಗಳೂರು : ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಎಂ.ಬಿ. ಪಾಟೀಲ್, ಅನಂತ ಕುಮಾರ್ ಹೆಗಡೆಯವರು ಕೋಮು, ಘರ್ಷಣೆ ಆರಂಭಿಸಲು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.


ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ, ಮುಸ್ಲಿಂ ಹುಡುಗಿಯ ಹಿಂದೆ ಓಡಿ ಹೋಗಿದ್ದೆ ನಿಮ್ಮ ಸಾಧನೆ ಎಂದು ಹೇಳಿದ್ದಕ್ಕೆ ಕಾಂಗ್ರೆಸ್ ನಾಯಕರು  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಎಂ.ಬಿ. ಪಾಟೀಲ್, ‘ಅನಂತ ಕುಮಾರ್ ಹೆಗಡೆಯವರ ಕುರಿತು ಮಾತನಾಡುವುದೇ ತಪ್ಪು ಅನ್ಸುತ್ತೆ. ಅವರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರಲು ಬಯಸುವವರು. ಅನಂತ ಕುಮಾರ್ ಹೆಗಡೆ ಅವರಿಗೆ ಪಾರ್ಲಿಮೆಂಟ್,  ಸಂವಿಧಾನದ ಮೇಲೆ ಗೌರವವಿಲ್ಲ.ಕೋಮು, ಘರ್ಷಣೆ ಆರಂಭಿಸಲು ಈ ರೀತಿಯ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.


‘ಸಂವಿಧಾನವನ್ನೇ ಬದಲಾಯಿಸಲು ಹೋದ ಸಂಸದ ಅವರು. ಈ ಹೇಳಿಕೆ  ಅನಂತ ಕುಮಾರ್ ಹೆಗಡೆಗೆ ಶೋಭೆ ತರುವಂಥದ್ದಲ್ಲ. ಇಂಥವರಿಗೆ ಚುನಾವಣೆಯಲ್ಲಿ ಜನರು ಸರಿಯಾದ ಉತ್ತರ ಕೊಡ್ತಾರೆ. ಇವರು ಪಾರ್ಲಿಮೆಂಟ್ ನಲ್ಲಿ ಇರಲು ಯೋಗ್ಯ ಅಲ್ಲ. ಗ್ರಾಮ ಪಂಚಾಯಿತಿಯ ಸದಸ್ಯ ಕೂಡ ಆಗಲು  ಯೋಗ್ಯ ಅಲ್ಲ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ