ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ವಾರ್ಷಿಕ ಪರೀಕ್ಷೆ ಆತಂಕ, ಮರು ಪರೀಕ್ಷೆ ಇಲ್ಲ

ಬುಧವಾರ, 23 ಫೆಬ್ರವರಿ 2022 (18:34 IST)
ರಾಜ್ಯದಲ್ಲಿ ಹಿಜಾಬ್ ವಿವಾದ ಇನ್ನೂ ಶಾಂತವಾಗಿಲ್ಲ. ಇದರ ನಡುವೆ ಮಾರ್ಚ್, ಏಪ್ರಿಲ್‌ನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಈಗಾಗಲೇ ಕಾಲೇಜುಗಳಲ್ಲಿ ಹಾಲ್ ಟಿಕೆಟ್ ವಿತರಣೆ ಆರಂಭವಾಗಿದ್ದು, ವಿದ್ಯಾರ್ಥಿನಿಯರು ಕಾಲೇಜಿನ ಒಳಗೆ ಬರಲು ಒಪ್ಪುತ್ತಿಲ್ಲ.
ಇನ್ನು ಇತ್ತೀಚೆಗಷ್ಟೇ ಪಿಯುಸಿ ಪ್ರಾಯೋಗಿಕ ಪರೀಕ್ಷೆ ನಡೆದಿದ್ದು, ಹಿಜಾಬ್ ಕಾರಣದಿಂದ ಪರೀಕ್ಷೆಗೆ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಾಜರಾಗಿಲ್ಲ. ಇವರ ಮರುಪರೀಕ್ಷೆಗೆ ಅವಕಾಶ ಇಲ್ಲದಂತಾಗಿದೆ. ಇದೇ ರೀತಿ, ವಾರ್ಷಿಕ ಪರೀಕ್ಷೆಯೂ ಕೈ ತಪ್ಪುವ ಭೀತಿಯನ್ನು ವಿದ್ಯಾರ್ಥಿನಿಯರು ಅನುಭವಿಸುತ್ತಿದ್ದಾರೆ.
ಹಿಜಾಬ್ ತೆಗೆದು ತರಗತಿಗೆ ಬಾರದ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯೂ ಕೈ ತಪ್ಪುವ ಸಾಧ್ಯತೆ ಇದ್ದು, ಇವರಿಗೂ ಮರು ಪರೀಕ್ಷೆಗೆ ಅವಕಾಶ ಇಲ್ಲ. ಹಾಲ್ ಟಿಕೆಟ್ ವಿತರಣೆ ಈಗಾಗಲೇ ಆರಂಭವಾಗಿದ್ದು, ವಿದ್ಯಾರ್ಥಿನಿಯರು ಹಾಲ್ ಟಿಕೆಟ್ ಪಡೆಯಲು ಶಾಲೆ-ಕಾಲೇಜಿಗೆ ಬರುತ್ತಿಲ್ಲ. ಪಿಯು ಬೋರ್ಡ್ ಹಾಲ್ ಟಿಕೆಟ್ ತಿದ್ದುಪಡಿ ಇದ್ದಲ್ಲಿ ಅವಕಾಶ ಕಲ್ಪಿಸಿತ್ತು. ಆದರೆ ತಿದ್ದುಪಡಿ ಪ್ರಕ್ರಿಯೆಯಿಂದಲೇ ವಿದ್ಯಾರ್ಥಿನಿಯರು ಅಂತರ ಕಾಯ್ದುಕೊಂಡಿದ್ದಾರೆ. ಶಿಕ್ಷಣ ಇಲಾಖೆ ಮರು ಪರೀಕ್ಷೆ ನೀಡದಿರಲು ನಿರ್ಧಾರ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ