ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತಕ್ಕೆ ಮತ್ತೊಂದು ದೂರು

ಬುಧವಾರ, 23 ನವೆಂಬರ್ 2022 (13:46 IST)
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಮತ್ತೆ ಲೋಕಾಯುಕ್ತ ಮೆಟ್ಟಿಲೇರಲು ಎನ್ ಆರ್ ರಮೇಶ್‌ ಸಿದ್ದತೆ ನಡೆಸಿದ್ದಾರೆ.ಎನ್ ಆರ್ ರಮೇಶ್ - ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ನಾಗಿದ್ದು, ಈ ಹಿಂದೆ ಕೂಡ ಸಿದ್ದರಾಮಯ್ಯ ವಿರುದ್ದ ಕೆಲ ಆರೋಪಗಳನ್ನ ಮಾಡಿದ್ರು.ಈಗ ಮತ್ತೆ ಸಿದ್ದರಾಮಯ್ಯ ವಿರುದ್ಧ ಆರೋಪಗಳನ್ನ ಮಾಡಿದ್ದಾರೆ.
 
ಇನ್ನೂ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಹಿರಿಯ IAS ಅಧಿಕಾರಿಗಳ ಸಹಕಾರದಿಂದ ಪ್ರಭಾವಿ ವ್ಯಕ್ತಿಗಳೊಂದಿಗೆ ಷಾಮೀಲಾಗಿದ್ದರು.ಹತ್ತಾರು ಕೋಟಿ ರೂಪಾಯಿ kick back ಪಡೆದಿದ್ದಾರೆ.ಬಡಾವಣೆ ನಿರ್ಮಾಣಕ್ಕೆಂದು BDA ಕಾನೂನುಬದ್ಧವಾಗಿ ಭೂ ಸ್ವಾಧೀನ ಪಡಿಸಿಕೊಂಡಿತ್ತು.ಅಂತಹ ₹400 ಕೋಟಿಗೂ ಹೆಚ್ಚು ಮೌಲ್ಯ ದ ಸರ್ಕಾರಿ ಸ್ವತ್ತನ್ನು ಅತ್ಯಂತ ಚಾಣಾಕ್ಷತನದಿಂದ De-notification ಮಾಡಿದ್ದಾರೆ.ಈ ಬೃಹತ್ ಸರ್ಕಾರಿ ಭೂಮಿ De-notification ಹಗರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತಕ್ಕೆ ದೂರು ನೀಡಲಾಗುತ್ತೆ.ಸಿದ್ದರಾಮಯ್ಯ, ಅತ್ಯಂತ ಹಿರಿಯ ಇಬ್ಬರು IAS ಅಧಿಕಾರಿಗಳು ಮತ್ತು ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡುವುದಾಗಿ ಎನ್ ಆರ್ ರಮೇಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ