ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಯುಕ್ತಕ್ಕೆ ದೂರು ನೀಡಿದ ಎನ್ ಆರ್ ರಮೇಶ್

ಬುಧವಾರ, 12 ಅಕ್ಟೋಬರ್ 2022 (14:31 IST)
ಮಾಜಿ ಸಿಎಂ ಸಿದ್ದರಾಮಯ್ಯ‌ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.ಸರ್ಕಾರಿ ಸ್ವತ್ತನ್ನ ಡಿನೊಟಿಫೈ ಮಾಡಿರೋ ಆರೋಪದಲ್ಲಿ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ರಿಂದ ದೂರು ದಾಖಲಾಗಿದೆ.ಕಾನೂನು ಗಾಳಿಗೆ ತೂರಿ ಸರ್ಕಾರಿ ಸ್ವತ್ತನ್ನ ಡಿನೊಟಿಫೈ ಮಾಡಿದ್ದಾರೆಂದು , 200 ಕೋಟಿಯ ಸರ್ಕಾರಿ ಸ್ವತ್ತನ್ನು ಡಿ - ನೋಟಿಫಿಕೇಷನ್ ಮಾಡಿದ್ದಾರೆಂದು ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿಬಂದಿದೆ.
 
ಲಾಲ್‍ ಬಾಗ್ ಸಿದ್ಧಾಪುರ ಗ್ರಾಮದ ೨ ಎಕರೆ ೩೯.೫ ಗುಂಟೆ ಜಮೀನು ದುರುಪಯೋಗಪಡಿಸಿಕೊಂಡಿದ್ದಾರೆಂದು ದೂರುದಾಖಲಾಗಿದೆ.ಬಿಡಿಎ ಉದ್ಯಾನವನ, ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವನ್ನ ಬಿಲ್ಡರ್ ಗೆ ಅನುಕೂಲ ಮಾಡಿಕೊಟ್ಟಿದ್ದಾರೆಂದು,ನಿಗಧಿತ ಜಾಗದಲ್ಲಿ ಹಲವು ನರ್ಸರಿಗಳು ಕಾರ್ಯ ನಿರ್ವಹಿಸುತ್ತಿದ್ದ ಜಾಗ 
ಅಶೋಕ್ ಧಾರಿವಾಲ್ ಖಾಸಗಿ ಬಿಲ್ಡರ್ ಗೆ ಅನುಕೂಲಮಾಡಿಕೊಟ್ಟಿದ್ದಾರೆಂದು ಆರೋಪ ಕೇಳಿಬರುತ್ತಿದೆ.ವಾಣಿಜ್ಯ ಸಂಕೀರ್ಣ ಬಳಕೆಗೆ ಅಶೋಕಗ ಧಾರಿವಾಲ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು.ಅಶೋಕ್ ಧಾರಿವಾಲ್  ಸಲ್ಲಿಸಿದ್ದ ಅರ್ಜಿಗಳನ್ನ ೨೦೧೩ ಕ್ಕೂ ಮೊದಲು  ಎರಡು ಬಾರಿ ತಿರಸ್ಕಾರ ಮಾಡಿದ್ದ ರಾಜ್ಯ ೨೦೧೪ ರಲ್ಲಿ ಅಶೋಕ್ ಧಾರಿವಾಲ್ ಅರ್ಜಿ ಸಲ್ಲಿಸುತ್ತಿದ್ದಂತೆ ಅನುಮೋದನೆ ಕೊಟ್ಟ ರಾಜ್ಯ ಬಿಡಿಎ ಈ ಜಾಗವನ್ನ ಪಾರ್ಕ್, ಸಾರ್ವಜನಿಕ ಬಳಕೆಗೆ ಮೀಸಲಿಟ್ಟಿತ್ತು.ಸಾರ್ವಜನಿಕರ ಬಳಕೆಗೆ ಮೀಸಲಿಟ್ಟ ಜಾಗವನ್ನ ಅಭಿವೃದ್ಧಿ ಮಾಡುವಂತಿಲ್ಲ ಹಾಗೂ Change of land use ಆದೇಶ ನೀಡುವಂತಿಲ್ಲ ಎಂಬ ಆದೇಶವಿದೆ.
 
De - Notify ಮಾಡುವ ಮೊದಲುವBMPC (Bangalore Metropolitan Planning Committee ಒಪ್ಪಿಗೆ ಅಗತ್ಯ,
೨೦೧೪ ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ BMPC ಒಪ್ಪಿಗೆ ಪಡೆಯದೆ ಡಿ ನೊಟಿಫೈ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖವಾಗಿದೆ.De - Notify” ಎಂಬುದರ ಬದಲಾಗಿ “Re Do” ಎಂಬ ಪದ ಬಳಸಿ ಈ ಕಾನೂನು ಬಾಹಿರ ಕಾರ್ಯಮಾಡಿದ್ದಾರೆಂದು ರಮೇಶ್ ಆರೋಪ ಮಾಡಿದ್ದಾರೆ.
De - Notification" ಮಾಡಲು ಸಹಕರಿಸಿದ ಅಂದಿನ ಬಿಡಿಎ ಆಯುಕ್ತ ಶ್ಯಾಂ ಭಟ್ ವಿರುದ್ಧವೂ ದೂರು ನೀಡಲಾಗಿದೆ. ಈ ಎಲ್ಲ ದೂರುಗಳಿವೆ ಸಂಬಂಧಿಸಿದಂತೆ ಕೂಡಲೇ ಸಿಐಡಿ ತನಿಖೆಗೆ ವಹಿಸುವಂತೆ ರಮೇಶ್ ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ