ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾದ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು

ಶನಿವಾರ, 19 ಆಗಸ್ಟ್ 2023 (14:30 IST)
ದೇಶದಲ್ಲೇ ಮೊಟ್ಟ ಮೊದಲ 3D ಪೋಸ್ಟ್ ಆಫೀಸ್ ನಮ್ಮ ಬೆಂಗಳೂರಿನಲ್ಲಿ ತಲೆ ಯತ್ತಿದೆ .ನಗರದ ಕೆಂಬ್ರಿಡ್ಜ್  ಬ್ರಿಡ್ಜ್ ಲೇಔಟ್ ನಲ್ಲಿ  3D ಅಂಚೆ ಕಚೇರಿ ತಲೆಯೆತ್ತಿದ್ದು,ನಿನ್ನೆ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವರಿಂದ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಲೋಕಾರ್ಪಣೆಮಾಡಲಾಗಿದೆ.ಟ್ರೀಟ್ ಮೂಲಕ ಸ್ವತಃ ಪ್ರಧಾನಿ ಮೋದಿ ಶುಭ ಕೋರಿದ್ದಾರೆ .1100 ಸ್ಕ್ವೇರ್ ಫೀಟ್ನಲ್ಲಿ ನಿರ್ಮಾಣಗೊಂಡ 3D ಪೋಸ್ಟ್ ಆಫೀಸ್ ನ್ನ ಕೇವಲ 25 ಲಕ್ಷ ರೂಪಾಯಿಯಲ್ಲಿ ನಿರ್ಮಾಣಗೊಂಡಿದೆ.ಕೇವಲ 45 ದಿನಗಳಲ್ಲಿ ಐದು ಜನರಿಂದ 3d ಪೋಸ್ಟ್ ಆಫೀಸ್ ‌ನಿರ್ಮಾಣಗೊಂಡಿದೆ.
 
3D ತಂತ್ರಜ್ಞಾನ ಮೂಲಕ ನಿರ್ಮಾಣಗೊಂಡ ಪೋಸ್ಟ್ ಆಫೀಸ್ ನೋಡಲು ಜನ ಹರಿದು ಬರುತ್ತಿದ್ದಾರೆ.ಸಂಪೂರ್ಣವಾಗಿ ಕಾಂಕ್ರೀಟ್ ನಿಂದಲೇ ಕಟ್ಟಡ ನಿರ್ಮಾಣಗೊಂಡಿದೆ.ಲಸೋಮವಾರದಿಂದ ಸಾರ್ವಜನಿಕರ ಬಳಕೆಗೆ  ಹೊಸ 3D ಅಂಚೆ ಕಚೇರಿಸಿಗಲಿದೆ.ಹೀಗಾಗಿ  ಪೋಸ್ಟ್ ಆಫೀಸ್ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ