ಭಾರತ ಮತ್ತು ಚೀನಾದ ಅಧಿಕಾರಿಗಳು ಬುಧವಾರ ಬೀಜಿಂಗ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ ಉದ್ದಕ್ಕೂ ಇರುವ ಬಿಕ್ಕಟ್ಟಿನ ಕುರಿತು ಬುಧವಾರ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆಸಿದ್ದು, ಈ ಚರ್ಚೆಯಲ್ಲಿ ಯಾವುದೇ ಪ್ರಗತಿಯ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ. ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತು ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ವರ್ಕಿಂಗ್ ಮೆಕ್ಯಾನಿಸಂ ಅಡಿಯಲ್ಲಿ ಮಾತುಕತೆಗಳನ್ನು ನಡೆಸಲಾಯಿತು. ಪೂರ್ವ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆ ಬಳಿ ಗಡಿ ಸಂಘರ್ಷಕ್ಕೆ ಕಾರಣವಾಗಿರುವ ಕೆಲ ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂಬ ಪ್ರಸ್ತಾವನೆ ಕುರಿತು ಚೀನಾದ ಬೀಜಿಂಗ್‌ನಲ್ಲಿ ಭಾರತ ಮತ್ತು ಚೀನಾ ದ್ವಿಪಕ್ಷೀಯ ಮಾತುಕತೆ ನಡೆಸಿದವು. ಜುಲೈ 2019 ರಲ್ಲಿ ನಡೆದ 14 ನೇ ಸಭೆಯ ನಂತರ ಇದು ಮೊದಲ ವೈಯಕ್ತಿಕ ಸಭೆಯಾಗಿದೆ. ಭಾರತ-ಚೀನಾ ಗಡಿ ಬಿಕ್ಕಟ್ಟು ಸಮಾಲೋಚನೆ ಮತ್ತು ಸಹಯೋಗ ಕುರಿತ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಲಾಯಿತು