ಉಪನ್ಯಾಸಕರಿಗೆ ಎನ್‍ಪಿ.ಎಸ್ ಜಾರಿಗೆ ಬಗ್ಗೆ ನ್ಯಾಯ ಸಮ್ಮತ ಕ್ರಮ : ಬೊಮ್ಮಾಯಿ

ಗುರುವಾರ, 23 ಫೆಬ್ರವರಿ 2023 (17:32 IST)
ಬೆಂಗಳೂರು : 2006ಕ್ಕೂ ಮೊದಲು ನೇಮಕ ಆಗಿರುವ ಉಪನ್ಯಾಸಕರಿಗೆ ಹಳೆ ಪಿಂಚಣೆ ಕೊಡುತ್ತೇವೆ. ನಂತರ ನೇಮಕಾತಿಯಾದವರಿಗೆ ಎನ್ಪಿ.ಎಸ್ ಕೊಡಲಾಗುತ್ತದೆ.

ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೂ ರಾಷ್ಟ್ರೀಯ ಪಿಂಚಣಿ ಯೋಜನೆ ಕೊಡುವ ಬಗ್ಗೆ ನ್ಯಾಯ ಸಮ್ಮತವಾಗಿ ತೀರ್ಮಾನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಅನುದಾನಿತ ಶಿಕ್ಷಕರಿಗೆ ಹಳೆ ಅಥವಾ ಹೊಸ ಪಿಂಚಣಿ ವ್ಯವಸ್ಥೆ ಕೊಡಬೇಕು. ನಿನ್ನೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. 

ಇದಕ್ಕೆ ಉತ್ತರಿಸಿದ ಸಿಎಂ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಸಗಿ ಅನುದಾನಿತ ಪದವಿ ಉಪನ್ಯಾಸಕರ ಪಿಂಚಣಿಗೆ 15 ಪರ್ಸೆಂಟ್ ಮ್ಯಾನೇಜ್ ಮೆಂಟ್ ಕೊಡಬೇಕು. 10 ಪರ್ಸೆಂಟ್ ನೌಕರರು ಕೊಡಬೇಕು. ಉದ್ಯೋಗಿ ಹಿತರಕ್ಷಣೆ ಮಾಡಲು ಈ ರೀತಿ ಕೊಡಬೇಕು. ಈಗಾಗಲೇ ಕಾರ್ಖಾನೆ ಮತ್ತು ಅದರ ಉದ್ಯೋಗಿಗಳು ಇದೇ ರೀತಿ ಕಾಂಟ್ರಿಬ್ಯೂಷನ್ ಕೊಡುತ್ತಿದ್ದಾರೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ