ಅಡುಗೆ ಅನಿಲ ದರ ಏರಿಕೆ ಹೊರೆಯಿಂದಾಗಿ ಕಂಗಾಲಾಗಿರುವ ಗ್ರಾಹಕರಿಗೆ ಮತ್ತೊಂದು ಬರೆ
ಅಡುಗೆ ಅನಿಲ ದರ ಏರಿಕೆ ಹೊರೆಯಿಂದಾಗಿ ಕಂಗಾಲಾಗಿರುವ ಗ್ರಾಹಕರಿಗೆ ಮತ್ತೊಂದು ಬರೆ ಬೀಳಲಿದೆ. ಗ್ಯಾಸ್ ಕನೆಕ್ಷನ್ ಶುಲ್ಕವನ್ನು ತೈಲ ಕಂಪೆನಿಗಳು ಏರಿಕೆ ಮಾಡುತ್ತಿವೆ. ಅನಿಲ ಸಂಪರ್ಕ ಪಡೆಯಲು ಪ್ರಸ್ತುತ ಡೆಪಾಸಿಟ್ ಸೇರಿ 1600 ರೂ. ಪಾವತಿಸಬೇಕಿತ್ತು. ಇದೀಗ ಸಂಪರ್ಕ ಶುಲ್ಕದಲ್ಲಿ ಬರೋಬ್ಬರಿ 850 ರೂ. ಹೆಚ್ಚಳ ಮಾಡಿದ್ದು, 2450 ರೂ. ನಿಗದಿಯಾಗಿದೆ. ತೈಲ ಕಂಪೆನಿಗಳಾದ ಎಚ್ಪಿಸಿಎಲ್, ಬಿಪಿಸಿಎಲ್ ಮತ್ತು ಐಒಸಿ ತಮ್ಮ ಗ್ಯಾಸ್ ಏಜೆನ್ಸಿಗಳ ಮೂಲಕ ಈ ಪರಿಷ್ಕರಣೆ ದರವನ್ನು ಅನುಷ್ಠಾನಗೊಳಿಸಲಿವೆ.