ಮತ್ತೆ ಅಡುಗೆ ಅನಿಲ ದರ ಹೆಚ್ಚಳದ ಶಾಕ್!

ಬುಧವಾರ, 1 ಸೆಪ್ಟಂಬರ್ 2021 (09:49 IST)
ನವದೆಹಲಿ: ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್(LPG) ಸಿಲಿಂಡರ್ ಬೆಲೆಯನ್ನು ಬುಧವಾರದಿಂದ (ಸೆಪ್ಟೆಂಬರ್ 1, 2021) ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್ಗೆ 25 ರೂ. ಹೆಚ್ಚಳ ಮಾಡಲಾಗಿದೆ.

ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು 75 ರೂ.ನಷ್ಟು ಹೆಚ್ಚಿಸಲಾಗಿದೆ. ತುಂಬಿದ 14.2 ಕೆಜಿ ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್(ಎಲ್ಪಿಜಿ) ಸಿಲಿಂಡರ್ ಈಗ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ 884.50 ರೂ.ಆಗಿದೆ.
ಸಬ್ಸಿಡಿ ರಹಿತ ಎಲ್.ಪಿ.ಜಿ. ಸಿಲಿಂಡರ್ ಬೆಲೆಯನ್ನು ಆಗಸ್ಟ್ 17 ರಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್ ಗೆ 25 ರೂಪಾಯಿ ಹೆಚ್ಚಿಸಲಾಗಿತ್ತು. ಈ ಹಿಂದೆ ಜುಲೈ 1 ರಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 25.50 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ 25 ರೂ. ಜಾಸ್ತಿಯಾಗಿದೆ.
LPG ಬೆಲೆಗಳು ಕಳೆದ 7 ವರ್ಷಗಳಲ್ಲಿ ದ್ವಿಗುಣಗೊಂಡಿದೆ. 2014 ರ ಮಾರ್ಚ್ 1 ರಂದು ಪ್ರತಿ ಸಿಲಿಂಡರ್ಗೆ 410.50 ರೂ. ಇದ್ದ ಎಲ್ಪಿಜಿ ಸಿಲಿಂಡರ್ ದರ ಈಗ 859.50 ರೂ.ಗಳಷ್ಟು ಆಗಿದೆ.
ಪ್ರಸ್ತುತ, ಸರ್ಕಾರವು ಪ್ರತಿ ವರ್ಷ ಒಂದು ಮನೆಗೆ 12 ಸಬ್ಸಿಡಿ ಎಲ್ಪಿಜಿ ಸಿಲಿಂಡರ್ಗಳನ್ನು ನೀಡುತ್ತದೆ. 12 ಮರುಪೂರಣಗಳ ವಾರ್ಷಿಕ ಕೋಟಾದ ಮೇಲೆ ಸರ್ಕಾರವು ನೀಡುವ ಸಬ್ಸಿಡಿಯ ಮೊತ್ತವು ತಿಂಗಳಿಂದ ತಿಂಗಳಿಗೆ ಬದಲಾಗುತ್ತದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಕಚ್ಚಾ ತೈಲ ಬೆಲೆಗಳು ಮತ್ತು ರೂಪಾಯಿ-ಡಾಲರ್ ವಿನಿಮಯ ದರಗಳ ಮೂಲಕ ದೇಶದಲ್ಲಿ ಎಲ್ಪಿಜಿ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.
ಸ್ಥಳೀಯ ತೆರಿಗೆಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಅಡುಗೆ ಅನಿಲ ದರಗಳು ಬದಲಾಗುತ್ತವೆ. ಸಾಮಾನ್ಯವಾಗಿ, ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ಪ್ರತಿ ತಿಂಗಳ ಮೊದಲ ದಿನದಂದು ದರ ಪರಿಷ್ಕರಣೆ ಮಾಡಿ ಜಾರಿಗೆ ತರಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ