ಉಪೇಂದ್ರ ಪ್ರಜಾಕೀಯಕ್ಕೆ ಅನುಪಮಾ ಶೆಣೈ ಬೆಂಬಲ

ಬುಧವಾರ, 23 ಆಗಸ್ಟ್ 2017 (13:17 IST)
ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಅಂದಿನ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾರ್ ಮಾಡಿದ್ದ ಮಾಜಿ ಡಿವೈಎಸ್`ಪಿ ಅನುಪಮಾ ಶೆಣೈ ಪ್ರಜಾಕಾರಣ ಮಾಡಲು ಹೊರಟಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ತಮ್ಮ ಬೆಂಬಲವನ್ನ ಸೂಚಿಸಿದ್ದಾರೆ.

ಉಪೇಂದ್ರ ಅವರನ್ನ ಭೇಟಿಯಾದ ಅನುಪಮಾ ಶೆಣೈ ತಮ್ಮ ಬೆಂಬಲವನ್ನ ಸೂಚಿಸಿದ್ದಾರೆ. ಈ ಬಗ್ಗೆ ಉಪೇಂದ್ರ ಟ್ವಿಟ್ಟರ್`ನಲ್ಲಿ ಹೇಳಿಕೊಂಡಿದ್ದಾರೆ. ಅನುಪಮಾ ಶೆಣೈ ಜೊತೆಗಿನ ಮಾತುಕತೆಯ ಫೋಟೊವನ್ನೂ ಟ್ವಿಟ್ಟರ್`ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಪ್ರಜಾಕೀಯಕ್ಕೆ ಬೆಂಬಲ ಸೂಚಿಸುವವರು ಐ ಸಪೋರ್ಟ್ ಪ್ರಜಾಕೀಯ ಎಂಬ ಬೋರ್ಡ್ ಅನ್ನ ನಿಮ್ಮ ಮನೆ, ಅಂಗಡಿ, ವಾಹನದ ಮುಂದೆ ಹಾಕಿಕೊಂಡು ಸೆಲ್ಫಿ ತೆಗೆದು ಪೋಸ್ಟ್ ಮಾಡುವಂತೆ ಹೇಳಿದ್ದಾರೆ.

ಇತ್ತೀಚೆಗೆ ಪ್ರಜಾಕಾರಣ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದ ಉಪೇಂದ್ರ ಅವರು ಪ್ರಜಾಕೀಯದ ಚಟುವಟಿಕೆಗಳನ್ನ ನಡೆಸುತ್ತಿದ್ದಾರೆ. ಸಮಾಜದ ಹಲವು ಜನರ ಜೊತೆ ಸಭೆಗಳನ್ನ ನಡೆಸುತ್ತಿರುವ ಪೋಟೋಗಳನ್ನ ಟ್ವಿಟ್ಟರ್`ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ