ಓಮಿಕ್ರೋನ್ ವೈರಸ್ ಬಗ್ಗೆ ರಾಜ್ಯದ ಜನರಲ್ಲಿ ಆತಂಕ
ಓಮಿಕ್ರೋನ್ ವೈರಸ್ ಬಗ್ಗೆ ರಾಜ್ಯದ ಜನರಲ್ಲಿ ಇನ್ನಿಲ್ಲದ ಆತಂಕ ಭೀತಿ ಶುರುವಾಗಿದೆ. ಈಗಾಗಲೇ ಓಮಿಕ್ರೋನ್ ವೈರಸ್ ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಡೆ ತನ್ನ ಆಟಹಾಸ ಮುಂದುವರೆಸುತ್ತಿದೆ. ನಿನ್ನೆ 12 ದೇಶದಲ್ಲಿ ಕಂಡುಬಂದಂತಹ ವೈರಸ್ ಇಂದು 18 ದೇಶಗಳಲ್ಲಿ ವೈರಸ್ ಸ್ಪ್ರೇಡ್ ಆಗಿದೆ. ಇನ್ನೂ ಮುಂದಿನ ದಿನಗಳಲ್ಲಿ ವೈರಸ್ ಇನ್ನಷ್ಟು ದೇಶಗಳಲ್ಲಿ ಸ್ಪ್ರೇಡ್ ಆಗುವಂತಿದೆ. ಇನ್ನೂ ವೈರಸ್ ಗೆ ರಾಜ್ಯ ರಾಜಧಾನಿ ಬೆಚ್ಚಿಬಿದ್ದಿದ್ದು , ಈ ಭಾಗದಲ್ಲಿ ಸಾಕಷ್ಟು ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಲಾಗ್ತಿದೆ. ಏರ್ ಪೋರ್ಟ್ ಗಳಲ್ಲಿ ಗಡಿಭಾಗಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯಸಚಿವ ಸುಧಾಕರ್ ಸಿಎಂ ಬಸವರಾಜ್ ಬೊಮ್ಮಾಯಿಯೊಂದಿಗೆ ಚರ್ಚೆ ನಡೆಸಲ್ಲಿದ್ದಾರೆ. ಇನ್ನೂ ಇದೇ ವೇಳೆ ಮಾತನಾಡಿದ ಸುಧಾಕರ್ ಈಗಾಗಲೇ ರಾಜ್ಯದಲ್ಲಿ ಇಬ್ಬರಿಗೆ ಪಾಸಿಟಿವ್ ಆಗಿದೆ. ಅವರ ಸ್ಯಾಂಪಲ್ ನ್ನು ಜಿನೊಮಿಕ್ ಸಿಕ್ವೆನ್ಸ್ ಗೆ ಕಳುಹಿಸಿದ್ದೇವೆ. ರೋಗದ ಲಕ್ಷಣ ತೀವ್ರವಾಗಿಲ್ಲ. ಎರಡೂ ಮೂರು ದಿನಗಳಲ್ಲಿ ಅವರ ವರದಿ ಬರಲಿದೆ. ಆದ್ರೆ ಯಾವುದೇ ಕಾರಣಕ್ಕೂ ಶಾಲೆ, ಆರ್ಥಿಕ ಚಟುವಟಿಕೆ ಮೇಲೆ ನಿರ್ಬಂಧ ಹೆರುವುದಿಲ್ಲ ಎಂದು ಸಿಎಂ ಕೂಡ ಸ್ಪಷ್ಟಪಡಿಸಿದ್ದಾರೆ. ನಾವು ಕೂಡ ಅದನ್ನೇ ಹೇಳ್ತೇವೆ , ಲಾಕ್ ಡೌನ್ ಅಂತಹ ಪ್ರಸ್ತಾವನೆ ಇಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದ್ದಾರೆ